ಸಿಕ್ಕಿದ್ದ ಸರ ವಾರಸುದಾರರಿಗೆ ಹಸ್ತಾಂತರ

11 RPT 3
ಬಂಗಾರದ ಸರವನ್ನು ಶಿಕ್ಷಕಿ ಪಾರ್ವತಿಬಾಯಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಾಲೀಕನಿಗೆ ಹಸ್ತಾಂತರಿಸಿದರು. ಪಿಎಸ್‌ಐ ರಾಜುರೆಡ್ಡಿ ಇತರರಿದ್ದರು.
Published on

ರಿಪ್ಪನ್‌ಪೇಟೆ: ಕೋಡೂರಿನ ಅಮ್ಮನಘಟ್ಟ ಬಸ್ ನಿಲ್ದಾಣದ ಸಮೀಪ ಸಿಕ್ಕ ಬಂಗಾರದ ಸರವನ್ನು ಶಿಕ್ಷಕಿ ಪಾರ್ವತಿ ಬಾಯಿ ಸೋಮವಾರ ಪಟ್ಟಣದ ಪೊಲೀಸರ ಸಮ್ಮುಖದಲ್ಲಿ ಸರದ ವಾರಸುದಾರ ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು. ಮಲ್ಲಾಪುರದ ಶಿವಕುಮಾರ್ ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಆಗಿದ್ದು, ಕಾರ್ಯನಿಮಿತ್ತ ಕೋಡೂರು ಭಾಗದ ಗ್ರಾಮಗಳಿಗೆ ತೆರಳಿದಾಗ ಕೊರಳಲ್ಲಿದ್ದ 9 ಗ್ರಾಂ ತೂಕದ ಚಿನ್ನದ ಸರ ಕಳೆದುಹೋಗಿತ್ತು. ಸರ ಕೋಡೂರು ಶಾಲೆ ಶಿಕ್ಷಕಿ ಪಾರ್ವತಿಬಾಯಿಗೆ ಸಿಕ್ಕಿದ್ದು, ಗ್ರಾಪಂ ಸಹಕಾರದೊಂದಿಗೆ ವಾರಸುದಾರರ ಹುಡುಕಾಟ ನಡೆಸಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಪೊಲೀಸರ ಸಮ್ಮುಖದಲ್ಲಿ ಹಸ್ತಾಂತರಿಸಿದರು. ಪಿಎಸ್‌ಐ ರಾಜುರೆಡ್ಡಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net