

ಯಾದಗಿರಿ: ಕೆಇಎದಿಂದ ಜರುಗಿದ್ದ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ತೀವೃಗೊಳಿಸಿದ್ದು, ಗುರುವಾರ ನಗರಕ್ಕೆ ಬೆಂಗಳೂರು ಸಿಐಡಿ ವಿಭಾಗದ ಎಸ್‌ಪಿ ರಾಘವೇಂದ್ರ ಹೆಗಡೆ ಆಗಮಿಸಿ ಪೊಲೀಸ್ ತನಿಖಾಧಿಕಾರಿಗಳಿಂದ ಕೆಲ ಮಹತ್ವದ ಮಹಿತಿ ಪಡೆದುಕೊಂಡರು.
ಯಾದಗಿರಿ ನಗರದ ಹಳೇ ಬಸ್‌ನಿಲ್ದಾಣದ ಮುಂದಿನ ಪ್ರವಾಸಿ ಮಂದಿರದಲ್ಲಿ ದಿನವಿಡಿ ಸಿಐಡಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದರು. ಸಿಪಿಐಗಳಾದ ಹರಿವರ್ಧನ ಹಾಗೂ ಸಂಗಮನಾಥ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಪರೀಕ್ಷಾ ಹಗರಣದ ತನಿಖೆ ಆರಂಭಗೊ0ಡಿದೆ.
ಕಳೆದ ತಿಂಗಳು ನಗರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ನಿಗಮ ಮಂಡಳಿಗಳಲ್ಲಿನ ಎಫ್‌ಡಿಎ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ವೇಳೆ ಕೇಂದ್ರದಲ್ಲಿ ಬ್ಲೂಟೂತ್ ಡಿವೈಎಸ್ ಪತ್ತೆಯಾಗಿತ್ತು. ಕೆಇಎ ಅಕ್ರಮ ಕೇವಲ ಯಾದಗಿರಿ ಮಾತ್ರವಲ್ಲದೆ, ದೂರದ ಹುಬ್ಬಳ್ಳಿಗೂ ಲಿಂಕ್ ಕೊಟ್ಟಿದೆ. ಹುಬ್ಬಳ್ಳಿ ಮೂಲದ ವಾಟ್ಸಾಪ್ ಗ್ರೂಪ್‌ನಲ್ಲಿ ಬಾಸ್ ಎಂಬ ಹೆಸರಿನಲ್ಲಿ ಯಾದಗಿರಿಯ ಮಧ್ಯವರ್ತಿಗೆ ಉತ್ತರಗಳು ಬರೆದು ಹಾಕಿದ ನಂತರ ಡಿಲಿಟ್ ಮಾಡಿದ್ದು ಸಹ ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬAಧಪಟ್ಟAತೆ ಯಾದಗಿರಿ ನಗರ ಠಾಣೆಯಲ್ಲಿ ೫ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿ, ಒಟ್ಟು ೧೬ ಜನರ ಮೇಲೆ ದೂರು ದಾಖಲಿಸಿಕೊಳ್ಳಲಾಗಿತ್ತು.
ಇದರಲ್ಲಿ ೯ ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ನಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ರಾಜ್ಯ ಸರ್ಕಾರ ಪರೀಕ್ಷಾ ಹಗರಣವನ್ನು ಸಿಐಡಿಗೆ ಒಪ್ಪಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ತನಿಖಾಧಿಕಾರಿಗಳಿಂದ ಎಸ್‌ಪಿ ರಾಘವೇಂದ್ರ, ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಅವರು ಇಂಚಿAಚೂ ಮಾಹಿತಿ ಪಡೆದುಕೊಂಡರು.
ಸುಮಾರು ೨ ಗಂಟೆಗಳ ಕಾಲ ಪ್ರವಾಸಿ ಮಂದಿರದಲ್ಲಿ ಸಿಐಡಿ ಅಧಿಕಾರಿಗಳು ಚರ್ಚೆ ನಡೆಸಿದ್ದು, ಶುಕ್ರವಾರ ಬಂಧಿತ ಆರೋಪಿಗಳನ್ನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದಲ್ಲದೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಬಹುದು ಎನ್ನಲಾಗಿದೆ.