ಸಿಎಸ್‌ಐ ಗ್ರೇಸ್ ದೇಗುಲದಲ್ಲಿ ಕ್ರಿಸ್‌ಮಸ್ ಸಂಭ್ರಮ

IMG_20241225_180233
ನುಗ್ಗೇಹಳ್ಳಿ ಹೋಬಳಿ ಕೇಂದ್ರದ ಹಿರೀಸಾವೆ ರಸ್ತೆಯಲ್ಲಿರುವ ಸಿಎಸ್‌ಐ ಗ್ರೇಸ್ ದೇವಾಲಯದಲ್ಲಿ ಕ್ರೈಸ್ತರು ಸಂಭ್ರಮದಿಂದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಿಸ್‌ಮಸ್ ಆಚರಿಸಿದರು.
Published on

ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಹಿರೀಸಾವೆ ರಸ್ತೆಯಲ್ಲಿರುವ ಸಿಎಸ್‌ಐ ಗ್ರೇಸ್ ದೇವಾಲಯದಲ್ಲಿ ಬುಧವಾರ ಕ್ರೈಸ್ತರು ಸಂಭ್ರಮದಿಂದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಿಸ್‌ಮಸ್ ಆಚರಿಸಿದರು.

ಕ್ರೈಸ್ತರು ಸಿಎಸ್‌ಐ ಗ್ರೇಸ್ ದೇವಾಲಯದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವ ಮೂಲಕ ಯೇಸುವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪರಸ್ಪರ ಹಬ್ಬದ ಶುಭ ಕೋರುವ ಮೂಲಕ ಸಂಭ್ರಮಿಸಿದರು. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕಳೆದ ಎರಡು ದಿನಗಳಿಂದ ಚರ್ಚ್ ವಿದ್ಯುತ್ ದೀಪ ಅಲಂಕಾರಗಳಿಂದ ಕಂಗೊಳಿಸುತ್ತಿದೆ.

ಧರ್ಮಗುರು ರೆ. ಗಿರಿರಾಜ್ ಮತ್ತು ಜಾನ್ ಬಾಬು, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಸದಸ್ಯ ನಿಶ್ಚಲ್ ಐಸಾಕ್, ಮುಖಂಡರಾದ ಭಾಗ್ಯ ಜೇಮ್ಸ್, ಮೇಬಲ್ ದೇವಪ್ರಸಾದ್, ಸಾ ಮಿಲ್ ಪ್ರಕಾಶ್, ಜಾನ್ ವಿಲ್ಸನ್, ಸಂಜಯ್, ಜೋಸೆಫ್, ಮಂಜುನಾಥ್, ಮೈಕಲ್, ಅಣ್ಣಪ್ಪ, ಅಲ್ವಿನ್, ಗುರುಶಾಂತ, ಪ್ರಕಾಶ್, ಪಾರ್ವತಿ, ಅರುಣ ನಿಶ್ಚಲ್, ಮೊನಾಲಿಸಾ, ಸಿಮ್ರಾನ್, ಊಯನ್ ಪ್ರಕಾಶ್, ಶೋಭಾ ಜಾನ್, ಜಯಶೀಲ ಭಾಸ್ಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net