

ಚಿಕ್ಕಮಗಳೂರು: ಚಿಕ್ಕಮಗಳೂರು ಮೋಟರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏಪ್ರಿಲ್ ೫ ಮತ್ತು ೬ ರಂದು ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮೋಟರ್ ರ‍್ಯಾಲಿ ಆಯೋಜಿಸಲಾಗಿದ್ದು ಅದರ ಶೀರ್ಷಿಕೆಯುಳ್ಳ ಬ್ಯಾನರನ್ನು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಮತ್ತು ಸಮಾಜ ಸೇವಕ ಎ.ಎಸ್.ಸಲ್ಮಾನ್ ಬಿಡುಗಡೆಗೊಳಿಸಿದರು.
ನಗರದಲ್ಲಿನ ಹೋಟೆಲ್‌ನಲ್ಲಿ ರ‍್ಯಾಲಿಯ ಬ್ಯಾನರ್ ಬಿಡುಗಡೆಗೊಳಿಸಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಕುಮಾರ್, ಜಿಲ್ಲೆಯ ಹೆಸರನ್ನು ರಾಷ್ಟçದಾದ್ಯಂತ ಪಸರಿಸಲು ಸಂಸ್ಥೆ ತವಕಿಸುತ್ತಿದೆ. ಸಂಸ್ಥೆಯ ಆಯೋಜಕರಾದ ಅಲ್ಮಾಜ್ ಅಹ್ಮದ್ ಅವರ ಕಾರ್ಯನಿಷ್ಠೆಗೆ ನಾವು ಧನ್ಯವಾದಗಳು ಅರ್ಪಿಸಬೇಕಿದೆ ಮತ್ತು ಅವರ ಈ ಕಾರ್ಯದಿಂದ ಜಿಲ್ಲೆಯ ಹಲವು ಚಾಲನೆಯಲ್ಲಿ ಪರಿಣಿತಿ ಪಡೆದ ಪ್ರತಿಭಾವಂತ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಏಪ್ರಿಲ್ ತಿಂಗಳ ಐದು ಮತ್ತು ಆರನೇ ತಾರೀಕು ನಡೆಯುವ ಈ ಪಂದ್ಯಾವಳಿಗೆ ನಮ್ಮ ಸಹಕಾರ ಇರಲಿದೆ ಎಂದು ತಿಳಿಸಿದರು.
ದಲಿತ ಜನ ಸೇನಾ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಮಾತನಾಡಿ, ಸಿಎಂಎಸ್‌ಸಿ ಸಂಸ್ಥೆಯು ಪ್ರತಿ ವರ್ಷ ಉತ್ತಮ ರೀತಿಯಲ್ಲಿ ಮೋಟಾರ್ ವಾಹನಗಳ ಪಂದ್ಯಾವಳಿ ಆಯೋಜಿಸುತ್ತಿದ್ದಾರೆ. ಈ ಮೊದಲು ಕಾಫಿ ನಾಡಿನಲ್ಲಿ ಕಾಫಿ ಡೇ ರ‍್ಯಾಲಿ ಪ್ರಖ್ಯಾತವಾಗಿತ್ತು. ಆದರೆ ಈಗ ಇವರ ಮುಂದಾಲೋಚನೆ ಸ್ಥಳೀಯ ಪ್ರತಿಭೆಗಳನ್ನು ಮುನ್ನಲೆಗೆ ತರುವಂತಹ ಉತ್ತಮ ಆಲೋಚನೆಯಿಂದ ಪ್ರತಿವರ್ಷ ಸಿಎಂಎಸ್‌ಸಿ ಸಂಸ್ಥೆಯಿAದ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಮೋಟಾರ್ ರ‍್ಯಾಲಿ ಆಯೋಜನೆ ಮಾಡಲಾಗುತ್ತಿದೆ ಎಂದರು.
ಚಿಕ್ಕಮಗಳೂರು ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಲ್ಮಾಜ್ ಅಹಮದ್ ಮಾತನಾಡಿ, ಇದು ಕೇವಲ ಮೋಟರ್ ಸ್ಟೋಟ್ಸ್ ಪಂದ್ಯಾವಳಿಯಲ್ಲ. ಈ ಮೂಲಕ ನಮ್ಮ ಕಾಫಿ ನಾಡಿನ ಜನರಿಗೆ ವಿಶೇಷ ಅರಿವು ಮೂಡಿಸಲು ಮೋಟಾರ್ಸ್ ಸ್ಪೋರ್ಟ್ಸ್ ಪಂದ್ಯಾವಳಿಯೊAದಿಗೆ ರಕ್ತದಾನ ಶಿಬಿರವನ್ನು ಸಹ ಏರ್ಪಡಿಸಲಾಗಿದೆ. ಇಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ತಮ್ಮ ರಕ್ತದ ಗುಂಪಿನ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಪಂದ್ಯಾವಳಿಯಲ್ಲಿ ರಕ್ತದಾನ ಮಾಡಲು ಸಹಾಯವಾಗದಿದ್ದರೂ ಮುಂದಿನ ದಿನಗಳಲ್ಲಿ ಇವರ ರಕ್ತದ ಗುಂಪಿನ ವಿವರಗಳನ್ನು ಸಂಗ್ರಹಿಸಿ ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವು ನೀಡಲು ಇವರಿಂದ ರಕ್ತವನ್ನು ಪಡೆಯಲು ಮತ್ತು ರೋಗಿಯ ಜೀವವನ್ನು ಉಳಿಸಲು ನೆರವಾಗಲು ನಮ್ಮ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಖಜಾಂಚಿ ಜಗದೀಶ್ ಪ್ರಭು, ಮುಖಂಡರಾದ ವಿಜಯಕುಮಾರ್ ಮತ್ತಿತರರಿದ್ದರು.