ಸಿಎಂ ಹಸಿ ಬರ ಜಿಲ್ಲೆ ಘೋಷಿಸಲಿ

BALARAJ GUTTEDAR
Published on

ಕಲಬುರಗಿ: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆ ಹಾನಿಗೀಡಾಗಿದ್ದು, ಪ್ರವಾಹಕ್ಕೆ ಜನಜೀವನ ತತ್ತರಿಸಿದೆ. ಜಿಲ್ಲೆಗೆ ಸೆ.30ರಂದು ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿ ಬರ ಜಿಲ್ಲೆ ಎಂದು ೂಷಿಸಿ, ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಅ.6ರಂದು ರೈತರೊಂದಿಗೆ ಬೃಹತ್​ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್​ ಜಿಲ್ಲಾಧ್ಯಕ್ಷ ಬಾಲರಾಜ್​ ಗುತ್ತೇದಾರ ತಿಳಿಸಿದರು.

ಎರಡು ತಿಂಗಳಿಂದ ನಿರಂತರ ಮಳೆಗೆ ಬೆಳೆ, ಮನೆ, ರಸ್ತೆ ಹಾಳಾಗಿವೆ. ಹಲವು ಅಂಗನವಾಡಿ, ಶಾಲೆ ಶಿಥಿಲಗೊಂಡಿವೆ. ಆದರೆ ಸರ್ಕಾರ ಎರಡು ತಿಂಗಳಿಂದ ಸಮೀೆ ನೆಪ ಹೇಳುತ್ತಿದ್ದು, ಕೂಡಲೇ ಸ್ಪಂದಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಲಬುರಗಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಹಸಿ ಬರ ೂಷಣೆ ಮಾಡಬೇಕು. ಸಮೀಕ್ಷೆ ಹೆಸರಿನಲ್ಲಿ ಸಮಯ ವ್ಯರ್ಥ ಮಾಡಬಾರದು. ಕಳೆದ ವರ್ಷದ ಬೆಳೆ ಪರಿಹಾರದ ಜತೆ ಈ ವರ್ಷ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಕೂಡಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಕಲ್ಯಾಣದ ಜಿಲ್ಲೆಗಳು ಜಲಪ್ರಳಯಕ್ಕೆ ತತ್ತರಿಸಿವೆ. ಕಳೆದ ವರ್ಷ, ಪ್ರಸಕ್ತ ವರ್ಷ ಮಳೆಗೆ ಸಂಪೂರ್ಣ ಬೆಳೆ ಹಾನಿಗೀಡಾಗಿದೆ. ಆದರೆ, ರಾಜ್ಯದ ಕೃಷಿ ಸಚಿವರು ಎಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ನಮ್ಮಲ್ಲಿನ ರೈತರ ಕಷ್ಟಕ್ಕೆ ನೆರವು ನೀಡುವ ಮುನ್ನ ಕಷ್ಟಕ್ಕೆ ಕರಗುವ ಕೆಲಸ ಮಾಡಲಿ. ಇಲ್ಲಿವರೆಗೂ ಒಂದೆ ಒಂದು ಹೇಳಿಕೆ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಿಂಗೆ ಬಂದಿ ಹಾಂಗೆ ಹೋಗುತ್ತಾರೆ. ಒಟ್ಟಾರೆಯಾಗಿ ರೈತರ ಕಷ್ಟಕ್ಕೆ ರಾಜ್ಯ ಸರ್ಕಾರದಿಂದ ಸ್ಪಂದನೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಶಿವಕುಮಾರ ನಾಟೀಕಾರ, ಬಸವರಾಜ ತಡಕಲ್​, ಬಸವರಾಜ ಬಿರಬಿಟ್ಟಿ, ಶಾಮರಾವ ಸೂರನ, ರಾಮಚಂದ್ರ ಅಟ್ಟೂರ, ಪ್ರವಿಣ ಜಾಧವ, ಮಲ್ಲಿಕಾರ್ಜುನ ಸಂಗಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net