ಸಿಎಂ ಸಿದ್ದು ರಾಜಕೀಯ ಗುರು ದಿ.ಬಿ.ರಾಚಯ್ಯನವರ ಪತ್ನಿ ಗೌರಮ್ಮ ನಿಧನ..

IMG-20250207-WA0028
Published on

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಗುರುವಾಗಿದ್ದ ಕೇರಳ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಪತ್ನಿ, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ತಾಯಿ ಗೌರಮ್ಮ ನಿಧನರಾದರು.

ಸುಮಾರು 90 ವರ್ಷ ವಯಸ್ಸಿನ ಗೌರಮ್ಮ ಹಲವು ದಿನಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಕಳೆದ 15 ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಸ್ವಗ್ರಾಮ ಚಾಮರಾಜನಗರದ ಆಲೂರಿನಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.

ಕೆಲವು ತಿಂಗಳ ಹಿಂದೆ ಆಲೂರಿನಲ್ಲಿ ಬಿ.ರಾಚಯ್ಯ ಅವರ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಬಿ.ರಾಚಯ್ಯ ಅವರನ್ನು ನನ್ನ ರಾಜಕೀಯ ಗುರು ಎಂದು ನೆನೆದಿದ್ದರು. ವೇದಿಕೆಯಲ್ಲೇ ಇದ್ದ ಗೌರಮ್ಮ ಅವರ ಕೈರುಚಿಯನ್ನು ಸ್ಮರಿಸಿದ್ದರು.‌ ಕಾರ್ಯಕ್ರಮದಲ್ಲಿ ಸುದೀರ್ಘ ಸಮಯ ಕೂರಲಾಗದ ಗೌರಮ್ಮ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು.

=========

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net