ಸಿಎಂ ಸಿದ್ದರಾಮಯ್ಯರಿಂದ ಹೈನುಗಾರಿಕೆಗೆ ಹೆಚ್ಚು

KRN PH 1
Published on

ಸಾಲಿಗ್ರಾಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಿದ್ದು, 3 ಬಾರಿ ಹಾಲಿನ ದರ ಹೆಚ್ಚಿಗೆ ಮಾಡಿದ್ದ ಕೀರ್ತಿಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.


ತಾಲೂಕಿನ ಕೆಡಗ ಗ್ರಾಮದಲ್ಲಿ ನೂತನ ಬಿಎಂಸಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಯಿಂದ ರೈತರು ಆರ್ಥಿಕ ಅಭಿವೃದ್ಧಿ ಹೊಂದುವುದರ ಜತೆಗೆ ಕುಟುಂಬ ನಿರ್ವಹಣೆಗೂ ಹೈನುಗಾರಿಕೆ ಅನುಕೂಲವಾಗಲಿದೆ. ಪಶು ಸಂಗೋಪನಾ ಇಲಾಖಾ ವತಿಯಿಂದ ಹಸು ಖರೀದಿಗಾಗಿ ಸಾಲ ಸೌಲಭ್ಯ ದೊರೆಯಲಿದ್ದು, ಬಡ ರೈತ ಕುಟುಂಬದವರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದಕ ಸದಸ್ಯರ ಮಕ್ಕಳಿಗಾಗಿ ಸರ್ಕಾರ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ತೀರ್ಮಾನ ಮಾಡಿರುವುದನ್ನು ಸ್ವಾಗತಿಸಿದ ಶಾಸಕರು, ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಬಳಿಗೆ ತೆರಳುವಾಗ ಈ ಭಾಗದ ಶಾಸಕನಾಗಿ ಜತೆಯಲ್ಲಿದ್ದು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.


ಜಿಲ್ಲಾ ಹಾಲು ಒಕ್ಕೂಟದಿಂದ ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದೆ ಎಂದು ತಿಳಿಸಿದರು.
ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ಸರ್ಕಾರದ ವತಿಯಿಂದ ಹಾಲು ಉತ್ಪಾದಕರಿಗೆ ದೊರೆಯುವಂತಹ ಸವಲತ್ತನ್ನ್ನು ಒಕ್ಕೂಟದ ವತಿಯಿಂದ ಪ್ರಾಮಾಣಿಕವಾಗಿ ವಿತರಣೆ ಮಾಡುವ ಕೆಲಸ ಮಾಡುತ್ತಿರುವುದರ ಜತೆಗೆ ಶೇ.50ರ ರಿಯಾಯಿತಿ ದರದಲ್ಲಿ ರಬ್ಬರ್ ಮ್ಯಾಟ್ ಮತ್ತು ಹಾಲು ಕರೆಯುವ ಯಂತ್ರಗಳನ್ನು ನೀಡಲಾಗುತ್ತಿದೆ. ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಮೈಸೂರು ಜಿಲ್ಲಾ ಹಾಲು ಒಕ್ಕೂಟವನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಜಿಲ್ಲೆಯವರೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಏಳು ಶಾಸಕರೊಂದಿಗೆ ಭೇಟಿ ಮಾಡಿ, ಹೆಚ್ಚು ಅನುದಾನ ತರಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಬಿ.ನಟರಾಜ್, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮಾಜಿ ಸದಸ್ಯರಾದ ಗಾಂಧಿ ಶಿವಣ್ಣ, ಎಲ್.ಎಂ.ಸಣ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಮೈಮುಲ್ ಉಪವ್ಯವಸ್ಥಾಪಕ ಸಂತೋಷ್, ಗ್ರಾ.ಪಂ. ಅಧ್ಯಕ್ಷ ಶಿವಣ್ಣ, ಮಾಜಿ ಅಧ್ಯಕ್ಷ ತೇಜೋಮೂರ್ತಿ, ಸದಸ್ಯರಾದ ಚಂದ್ರೇಗೌಡ, ಸಿದ್ದರಾಜು, ಪಿಡಿಓ ಕೇಶವಮೂರ್ತಿ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಜಿ.ಕೆ.ಮಹದೇವ್, ಸಹಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಸುಕನ್ಯಾ, ನಿರ್ದೇಶಕರಾದ ಮುಕುಂದಮ್ಮ, ಲಕ್ಷ್ಮೀ, ಸಾವಿತ್ರಮ್ಮ, ರಾಜಮ್ಮ, ಭಾರತಿ, ಚಿತ್ರಾ, ಸವಿತಾ, ಕಾರ್ಯದರ್ಶಿ ಕಮಲಾ, ಸಿಬ್ಬಂದಿ ಶೋಭಾ, ಮಮತಾ, ಮುಖಂಡರಾದ ಶಿವಪ್ಪ, ದೇವೇಗೌಡ, ಮುತ್ತಯ್ಯ, ಮುತ್ತಾರ್ ಪಾಷಾ, ಶೌಕತ್ ಪಾಷಾ, ಡಿ.ದೇವರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net