ಸಿಎಂ ಮೇಲೆ ತನಿಖೆ ಸರಿಯಲ್ಲ

4
Published on

ಬೆಲಹೊಂಗಲ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಶಾಸಕ ಮಹಾಂತೇಶ ಕೌಜಲಗಿ ನೇತತ್ವದಲ್ಲಿ ಮಂಗಳವಾರ ಕಾಂಗ್ರೆಸ್​ ಕಾರ್ಯಕರ್ತರು ತಹಸೀಲ್ದಾರ್​ ಹನುಮಂತ ಶಿರಹಟ್ಟಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ರಾಜ್ಯ ಬಿಜೆಪಿ ನಾಯಕರ ಹಗರಣ ಸಾಕಷ್ಟಿವೆ. ಅವುಗಳ ಬಗ್ಗೆ ಕ್ರಮವಹಿಸದ ರಾಜ್ಯಪಾಲರು ಮುಡಾ ಪ್ರಕರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ತನಿಖೆಗೆ ಆದೇಶಿಸಿರುವುದು ಸರಿಯಲ್ಲ. ಇದು ಖಂಡನೀಯ ಎಂದರು.
ಪಟ್ಟಣದ ಶಾಸಕರ ನಿವಾಸದಿಂದ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ೂಷಣೆ ಕೂಗಿದರು.

ರಾಜ್ಯಪಾಲರ ನಡೆ ಖಂಡಿಸಿ ಬಿಜೆಪಿ ನಾಯಕರಿಗೆ ಧಿಕ್ಕಾರ ಕೂಗಿದರು. ಬ್ಲಾಕ್​ ಕಾಂಗ್ರೆಸ್​ ಅಧ್ಯ ಶಂಕರಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್​ ಅಧ್ಯ ಕಾರ್ತಿಕ ಪಾಟೀಲ, ಶಿವರುದ್ರ ಹಟ್ಟಿಹೊಳಿ, ಉಮೇಶ ಬೋಳೆತ್ತಿನ, ಶಶಿಧರ ಚಿಕ್ಕೋಡಿ, ಹಸನ್​ ಗೊರವನಕೊಳ್ಳ, ಮಹಾಂತೇಶ ಕಳ್ಳಿಬಡ್ಡಿ, ಈರಣ್ಣ ಸಂಪಗಾಂವ, ಶ್ರೀಕಾಂತ ಸುಂಕದ, ವಿನಾಯಕ ಬೆಲ್ಲದ, ರಮೇಶ ಪರಂಡಿ, ಮಡಿವಾಳಪ್ಪ ಅಕ್ಕಿಸಾಗರ, ಸುಭಾಸ ದೇಶನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net