ಸಿಎಂ ಭೇಟಿಯಾಗಲು ಅವಕಾಶ ಸಿಗದೆ ಕಣ್ಣೀರು ಹಾಕಿ ಕುಸಿದು ಬಿದ್ದ ಮಹಿಳೆ

Published on


ಕಲಬುರಗಿ ನಗರಕ್ಕೆ ಶನಿವಾರ ಆಗಮಿಸಿದದ  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭೇಟಿಗೆ ಬಂದಿದ್ದ  ಬಡ ಮಹಿಳೆಗೆ ಸಿಎಂ ದರ್ಶನ ಸಿಗದೆ ಕಣ್ಣೀರು  ಹಾಕಿ ಕುಸಿದು ಬಿದ್ದ ಘಟನೆ ನಡೆದಿದೆ.
ರಾಮ ಮಂದಿರ ಬಳಿಯ ನಿವಾಸಿಯಾಗಿರುವ ಸಂಗೀತಾ ಎಂಬುವರೇ ಕುಸಿದು ಬಿದ್ದವರು.
ಸಂಗೀತಾ ಹಾಗೂ ಕಾವೇರಿ ಎಂಬ ಮಹಿಳೆಯರು ಸಿಎಂ ಭೇಟಿಯಾಗಲು ನಗರದ ಹೈಕೋರ್ಟ್ ಮುಂಭಾಗದಲ್ಲಿರುವ ಶಾಸಕ ಎಂ.ವೈ.ಪಾಟೀಲ್ ಅವರ ಮನೆಯ ಬಳಿ ಬಂದಿದ್ದರು.ಕಾರ್ಯಕ್ರಮ ಮುಗಿಸಿಕೊಂಡು ಸಿಎಂ ಅಲ್ಲಿಗೆ ಬರುವ ಮಾಹಿತಿ ಅರಿತು ಕಾದು ಕುಳಿತುಕೊಂಡಿದ್ದರು.ಬೆಳಿಗ್ಗೆಯಿAದ ತಿಂಡಿ-ಊಟ ಮಾಡದೇ ಉಪವಾಸವಿದ್ದುಕೊಂಡು ಸಿಎಂಗಾಗಿ ಕಾದಿದ್ದರು. ಆದರೆ,ಕೊನೆಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತನ್ನ ಬವಣೆ ಹೇಳಿಕೊಂಡು ಸರ್ಕಾರದಿಂದ ಪರಿಹಾರ ಪಡೆದುಕೊಳ್ಳಲು ಯತ್ನಿಸಿದರೂ ಸಿಗದಿರುವುದರಿಂದ ಬಡ ಮಹಿಳೆ ಕಣ್ಣೀರು ಹಾಕಿದರು. ಈ ವೇಳೆಯಲ್ಲಿ  ಕುಸಿದು ಬಿದ್ದರು.
ಜೀವನ ನಡೆಸುವುದು ಕಷ್ಟವಾಗಿದೆ  ಏನಾದರೂ ಸಹಾಯಕ ಮಾಡಲು ಕೋರುವವರಿದ್ದರು.ಭದ್ರತೆಯಿಂದಾಗಿ ಸಿಎಂ ಭೇಟಿ ಸಾಧ್ಯವಾಗಲಿಲ್ಲ. ಮಹಿಳೆ ಕುಸಿದು ಬಿದ್ದದ್ದು ನೋಡಿದ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಆಸ್ಪತ್ರೆಗೆ ಸಾಗಿದರು. ಶಾಸಕರು ಮಹಿಳೆಗೆ ಸ್ಪಂದಿಸಿ ಸಿಎಂ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net