ಸಿಎಂ ಬೊಮ್ಮಾಯಿಗೆ ಯತ್ನಾಳ ಎಚ್ಚರಿಕೆ ? ಪ್ರಚಾರ ಸಭೆಯಲ್ಲಿ ಮಂತ್ರಿಗಿರಿಗೆ ಬೇಡಿಕೆ, ಸಚಿವ ಮಾಡದಿದ್ದರೆ ಬೇರೆಯೇ ಆಗುತ್ತದೆ !

yatnal
Published on

ವಿಜಯಪುರ: ಮಂತ್ರಿ‌ ಸ್ಥಾನ ನೀಡದೇ ಹೋದರೆ ಮುಂದಿನ 18 ತಿಂಗಳ ಬಳಿಕ ಬೇರೆಯೇ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ಬಸವರಾಜ ಬೊಮ್ಮಾಯಿಗೆ ಎಚ್ಚರಿಕೆ ನೀಡಿದರು.

ಆಲಮೇಲದಲ್ಲಿ ಮಂಗಳವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಒಂದು ಮಂತ್ರಿ ಸ್ಥಾನ ನಿಡಲೇಬೇಕು. ಇಲ್ಲವಾದರೆ ಮುಂದಿನ ಬಾರಿ ಮತ್ತೆ ಬೇರೆಯೇ ಆಗಲಿದೆ‌ ಎಂದರು.

ಮಂತ್ರಿ‌ ಸ್ಥಾನ ಕೊಟ್ಟು ನೋಡಿ ಜಿಲ್ಲೆಯ ಎಂಟು ವಿಧಾನ ಸಭೆ ಸ್ಥಾನಗಳ ಪೈಕಿ ಏಳು ಗೆಲ್ಲುತ್ತೇವೆ ಎನ್ನುವ ಮೂಲಕ ಮತ್ತೆ ಎಂದು ಕ್ಷೇತ್ರವನ್ನು ಬಿಟ್ಟುಕೊಟ್ಟರು. ಕೈ ಬಿಟ್ಟ ಕ್ಷೇತ್ರ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲರದ್ದಾ? ಎಂಬ ಅನುಮಾನ ಕಾಡಿತು.

ಇನ್ನು ಸಚಿವ‌ ವಿ. ಸೋಮಣ್ಣ ಅವರಿಗೆ ಬೆಂಗಳೂರಿನ ಉಸ್ತುವಾರಿ ನೀಡಬೇಕು. ಅವರಿಗೆ ತಾಕತ್ ಇದೆ. ನಿಮ್ ಜೊತೆ ಅಡ್ಡಾಡುವವರಿಗೆ ಕೊಡಬೇಡಿ. ಅವರು ಈಗಾಗಲೇ ಬೇರೆ ಕಡೆ "ಯಂಗೇಜ್" ಆಗಿದ್ದಾರೆ ಎಂದರು.

ಇನ್ನು ಸಿಂದಗಿ‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೇನೆ. ಕೆಲವರು ಏನೇನೋ ಹೇಳುತ್ತಾರೆ ಎಂದ ಯತ್ನಾಳ, ಸಿಂದಗಿ ಅಭ್ಯರ್ಥಿ ಗೆಲುವು ಸಾಮೂಹಿಕ ಹೋರಾಟದ ಫಲ, ಅದು ಯಾವುದೇ ವ್ಯಕ್ತಿಯಿಂದ ಆಗುವಂಥದ್ದಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net