ಸಿಎಂ ಬಿಟ್ಟು ಉಳಿದೆಲ್ಲರನ್ನು ಡಿಸಿಎಂ ಮಾಡಿ

photo 2
Published on

ಬಳ್ಳಾರಿ : ಕಾಂಗ್ರೆಸ್ ಪಕ್ಷದಲ್ಲಿ ಸಮುದಾಯಕ್ಕೊಂದು ಡಿಸಿಎಂ ಬೇಡಿಕೆಯಿದೆ. ಆದ್ದರಿಂದ ಸಿಎಂ ಬಿಟ್ಟು ಉಳಿದ ಎಲ್ಲ ಸಚಿವರನ್ನು ಡಿಸಿಎಂ ಮಾಡಿ ಎಂದು ಮಾಜಿ ಸಚಿವ ಸುರೇಶ್ ಕುಮಾರ ವ್ಯಂಗ್ಯವಾಡಿದರು.
ನಗರದಲ್ಲಿ ಮಂಗಳವಾರ ನಡೆದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು " ತುರ್ತು ಪರಿಸ್ಥಿತಿ ಸಂವಿಧಾನ ಆಶಯಕ್ಕೆ ಅಪಚಾರ " ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ‌ ಮಾತನಾಡಿದರು. ರಾಜ್ಯದಲ್ಲಿ ತೈಲ ಹಾಗೂ ಹಾಲಿನ ಬೆಲೆ ಏರಿಕೆಯು ಕಾಂಗ್ರೆಸ್ ‌ಪಕ್ಷದ ಮತ್ತೊಂದು ‌ಗ್ಯಾರಂಟಿಯಾಗಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೂ ಬೆಲೆ ಏರಿಕೆ‌ ಮಾಡಲಿಲ್ಲ. ಈಗ ನಿರಂತರವಾಗಿ ಪ್ರತಿಯೊಂದರ ಮೇಲೆ‌ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದೊಂದು ‌ಜನ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು. ಸಂಪನ್ಮೂಲ ಕ್ರೋಡಿಕರಣಕ್ಕೆ ಬೆಲೆ ಏರಿಕೆ ಮಾಡುವುದರ ಬಗ್ಗೆ ಮೊದಲೇ‌ ಹೇಳಬೇಕಿತ್ತು ಎಂದು ಪ್ರಶ್ನಿಸಿದರು. ಗ್ಯಾರಂಟಿ ಅಂತಾ ಅಧಿಕಾರಕ್ಕೆ‌ ಬಂದು ಪ್ರತಿಯೊಂದರ ಮೇಲೆ‌ ಬೆಲೆ ಏರಿಕೆ‌ ಮಾಡಿದರೆ‌ ಜನ ಸಾಮಾನ್ಯರು ಬದುಕುವುದು ಹೇಗೆ‌. ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಮೇಲೆಯೂ ಬೆಲೆ ಏರಿಕೆ‌ ಮಾಡಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net