

ಚಿತ್ರದುರ್ಗ: ಗೋವಿಂದ ಕಾರಜೋಳರಿಗೆ ಗೋ-ಬ್ಯಾಕ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಲ್ಲ,ಬಿಜೆಪಿ ಕಾರ‌್ಯಕರ್ತರು ಹೇಳಿದ್ದನ್ನು ಮುಖ್ಯಮಂತ್ರಿ ಪುನರುಚ್ಛಿಸಿದ್ದಾರೆ ಎಂದು ಕುಡಾ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಯಾರು ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ಆದರೆ ಕಾರಜೋಳರ ಸ್ಪರ್ಧೆ ಅವರ ಪಕ್ಷದ ಕಾರ್ಯಕರ್ತರಿಗೇ ಇಷ್ಟವಿಲ್ಲ. ಸಿದ್ದರಾಮಯ್ಯ ಅವರು ಬದಾಮಿಯಲ್ಲಿ ಸ್ಪರ್ಧಿಸ ಬೇಕೆಂದು ಜನರೇ ತೀರ್ಮಾನಿಸಿದ್ದರು. ಆದ್ದರಿಂದ ಅ ವರು ಅಲ್ಲಿ ಸ್ಪರ್ಧಿಸಿದ್ದರು.
ಸಿದ್ದರಾಮಯ್ಯರ ಸ್ಪರ್ಧೆಗೆ ಎಲ್ಲ ಕ್ಷೇತ್ರಗಳಿಂದಲೂ ಆಹ್ವಾನವಿದೆ. ಜಿಲ್ಲೆಗೆ ನಿಮ್ಮ ಕೊಡುಗೆ ಏನು.?ಲೂಟಿ ಹಣವನ್ನು ಇಲ್ಲಿ ಖರ್ಚು ಮಾಡಲು ಬಂದಿದ್ದೀರಾ?ನಮ್ಮ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ಸಂಸದರಾಗಿದ್ದವರು,ಸೋತಿದ್ದರೂ ಜನರೊಂದಿಗೆ ಇದ್ದಾರೆ. ಹಾಲಿ ಸಂಸದ ಎ.ನಾರಾಯಣಸ್ವಾಮಿ ಅವರು ಯಾಕೆ ಸ್ಪರ್ಧಿಸುತ್ತಿಲ್ಲವೆಂದು ಪ್ರಶ್ನಿಸಿದರು. ಎನ್.ಡಿ.ಕು ಮಾರ್,ವಲಿಖಾದ್ರಿ,ನರಹರಿ,ಮುದಸಿರ್,ಆಫ್ತಾಕ್ ಆಹ್ಮದ್ ಮತ್ತಿತರರು ಇದ್ದರು.
--