ಸಿಎಂ ಪರಿಹಾರ ನಿಧಿಗೆ ಹಣ ನೀಡಿದ ಬಾಲಕ

21 upbr 1-hundi hana denige
Published on

ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಬಾಲಕನೊಬ್ಬ ತನ್ನ ಜನ್ಮ ದಿನಕ್ಕೆಂದು ಕೂಡಿಟ್ಟಿದ್ದ ಹಣ ಹುಂಡಿಯನ್ನು ಕರೊನಾ ಸೋಂಕು ತಡೆಗೆ ಸ್ಥಾಪಿಸಿದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

ಗ್ರಾಮದ ಮೂರುಸಾವಿರ ವಿರಕ್ತಮಠಕ್ಕೆ ಸೋಮವಾರ ಆಗಮಿಸಿದ್ದ ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ ಅವರಿಗೆ ಮೂರು ವರ್ಷದ ಬಾಲಕ ಸಂಸ್ಕೃತ ಹೂಗಾರ ತಾನು ಕೂಡಿಟ್ಟ 508 ರೂಪಾಯಿಗಳಿದ್ದ ಹುಂಡಿಯನ್ನು ನೀಡಿದ್ದಾನೆ.

ಬಾಲಕ ಸಂಸ್ಕೃತ ಹೂಗಾರನಿಗೆ ಶ್ರೀಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹಾಗೂ ಶಾಸಕ ಅಮೃತ ದೇಸಾಯಿ ಜನ್ಮದಿನದ ಶುಭಾಷಯ ಕೋರಿದರು. ಈ ವೇಳೆ ಗ್ರಾಪಂ.ಅಧ್ಯಕ್ಷ ಮಹಾವೀರ ಅಷ್ಟಗಿ, ಮುಖಂಡ ತವನಪ್ಪ ಅಷ್ಟಗಿ, ಮಂಜುನಾಥ ಸಂಕಣ್ಣವರ, ಸಿಪಿಐ ಎಸ್.ಸಿ. ಪಾಟೀಲ, ಪಿಎಸ್​ಐ ಪ್ರಸಾದ ಪಣೆಕರ, ಝಾನ್ಸಿಲಕ್ಷ್ಮೀ ಹೂಗಾರ, ಕೃಷ್ಣಾ ಬುದ್ನಿ, ಉಪತಹಸೀಲ್ದಾರ್ ಪಿ.ಎ. ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net