ಸಿಎಂ ಪರಿಹಾರ ನಿಧಿಗೆ 15 ಲಕ್ಷ ರೂ. ನೆರವು

28KMT1
Published on

ಕುಮಟಾ: ಕರೊನಾ ತಡೆಗಟ್ಟುವ ಸಲುವಾಗಿ ಕುಮಟಾ ಎಪಿಎಂಸಿ ವತಿಯಿಂದ ಒಂದು ಸಾವಿರ ಮಾಸ್ಕ್ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 15 ಲಕ್ಷ ರೂ. ಪರಿಹಾರ ಚೆಕ್ ಅನ್ನು ಶುಕ್ರವಾರ ಉಪವಿಭಾಗಾಧಿಕಾರಿ ಅಜಿತ್ ಎಂ. ರೈ ಅವರಿಗೆ ಹಸ್ತಾಂತರಿಸಿದರು.

ಈ ವೇಳೆ ‘ವಿಜಯವಾಣಿ’ ಜತೆ ಮಾತನಾಡಿದ ಎಪಿಎಂಸಿ ಅಧ್ಯಕ್ಷ ರಾಮನಾಥ ಶ್ರೀಧರ ಶಾನಭಾಗ, ಕುಮಟಾ ಎಪಿಎಂಸಿ ವತಿಯಿಂದ ತಾಲೂಕಿನ ರೈತರಿಗಾಗಿ ಒಂದು ಸಾವಿರಕ್ಕೂ ಹೆಚ್ಚು ಮಾಸ್ಕ್​ಗಳನ್ನು ಖರೀದಿಸಿ ತಾಲೂಕಾಡಳಿತಕ್ಕೆ ನೀಡಿದ್ದೇವೆ. ಮಾಸ್ಕ್​ಗಳ ಸರಿಯಾದ ಬಳಕೆಯಾಗಲಿ. ಹಾಗೆಯೇ 15 ಲಕ್ಷ ರೂ. ಚೆಕ್ ಅನ್ನು ಕರೊನಾ ತಡೆಗಟ್ಟುವ ಕಾರ್ಯದಲ್ಲಿ ಸಹಕಾರವಾಗುವಂತೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಮರ್ಪಿಸಿದ್ದೇವೆ. ಕರೊನಾ ವಿರುದ್ಧದ ಹೋರಾಟದಲ್ಲಿ ಕುಮಟಾ ಎಪಿಎಂಸಿಯ ಚಿಕ್ಕ ಸೇವೆ ಇದಾಗಿದೆ ಎಂದರು.

ಎಪಿಎಂಸಿ ಉಪಾಧ್ಯಕ್ಷ ರಾಮಚಂದ್ರ ಹೆಗಡೆ ನಂದಯ್ಯನ್, ಸದಸ್ಯ ಅರವಿಂದ ಕೆ. ಪೈ, ರಾಯೇಶ ಎಂ. ಬಾಳಗಿ, ಕಾರ್ಯದರ್ಶಿ ಎಂ.ಸಿ. ಪಡಗಾನೂರ, ಉಪವಿಭಾಗಾಧಿಕಾರಿ ಕಾರ್ಯಾಲಯ ವ್ಯವಸ್ಥಾಪಕ ವಿ.ಆರ್. ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net