ಸಿಎಂ ಪರಿಹಾರ ನಿಧಿಗೆ 1 ಲಕ್ಷ ರೂ. ದೇಣಿಗೆ

20-UPBR-1
Published on


ಉಪ್ಪಿನಬೆಟಗೇರಿ: ಕರೊನಾ ನಿಯಂತ್ರಣ ಸಂಬಂಧ ಸರ್ಕಾರ ತೆರೆದಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತಮಠದ ಪೀಠಾಧಿಪತಿ ಕುಮಾರ ಶ್ರೀ ವಿರೂಪಾಕ್ಷ ಸ್ವಾಮೀಜಿಯವರು 1 ಲಕ್ಷ ರೂ. ದೇಣಿಗೆ ಚೆಕ್ ಅನ್ನು ತಹಸೀಲ್ದಾರ್ ಡಾ. ಸಂತೋಷ ಬಿರಾದಾರ ಅವರಿಗೆ ಸಲ್ಲಿಸಿದರು.

ಕರೊನಾ ನಿಯಂತ್ರಿಸಲು ನೆರವಾಗಲು ನಮ್ಮ ಮಠದಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂ. ನೀಡುತ್ತಿದ್ದೇವೆ. ಜತೆಗೆ ಗ್ರಾಮದ ಸಾರ್ವಜನಿಕರೂ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ ಸರ್ಕಾರಕ್ಕೆ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ಸಾಕಷ್ಟು ಜನರು ಸ್ವಯಂ ಪ್ರೇರಿತರಾಗಿ ಸರ್ಕಾರಕ್ಕೆ ಧನಸಹಾಯ ಮಾಡುತ್ತಿದ್ದಾರೆ. ನೀವು ಕೊಡುವ ಹಣ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗುತ್ತದೆ. ಅದರ ಪುಣ್ಯ ನಿಮಗೆ ಲಭಿಸುತ್ತದೆ ಎಂದರು.

ಮುಖಂಡ ತವನಪ್ಪ ಅಷ್ಟಗಿ, ಮಂಜುನಾಥ ಸಂಕಣ್ಣವರ, ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ಸಿಪಿಐ ಎಸ್.ಸಿ. ಪಾಟೀಲ, ಗರಗ ಪಿಎಸ್​ಐ ಪ್ರಸಾದ ಪೆಣೆಕರ, ಇಒ ಎಸ್.ಎಸ್. ಕಾದ್ರೊಳ್ಳಿ, ಉಪತಹಸೀಲ್ದಾರ್ ಪಿ.ಎ. ಪಾಟೀಲ, ಮಲ್ಲಿಕಾರ್ಜುನ ಯಲಿಗಾರ, ಕೃಷ್ಣಾ ಬುದ್ನಿ, ಬಸವರಾಜ ಕಬ್ಬೂರ, ಬಸವರಾಜ ಬೆಳವಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net