ಸಿಎಂ ಪದಕ ಪಡೆದ ಮಂಜಪ್ಪ

Manjappa padaka
Published on

ಚಿತ್ರದುರ್ಗ: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಚಿತ್ರದುರ್ಗದ ಬಡಾವಣೆ ಪೊಲೀಸ್ ಠಾಣೆಯ ಸಿಎಚ್‌ಸಿ ಎಂ.ಆರ್.ಮಂಜಪ್ಪ ಅವರು ಸಿಎಂ ಪದಕಕ್ಕೆ ಭಾಜನರಾದರು.

ಸಿಪಿಸಿಯಾಗಿ 2005ರ ಮಾರ್ಚ್ 14ರಂದು ಪೊಲೀಸ್ ಇಲಾಖೆಗೆ ಸೇರಿದ ಮಂಜಪ್ಪ, ವಿಜಯಪುರ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿ ಪಡೆದಿದ್ದಾರೆ. ಚಿತ್ರದುರ್ಗದ ಸಂಚಾರ ಪೊಲೀಸ್ ಠಾಣೆ, ಕೋಟೆ ಪೊಲೀಸ್ ಠಾಣೆ, ಬಡಾವಣೆ ವೃತ್ತ ಕಚೇರಿಯಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net