

ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ದರ್ಶನ ಪಡೆದು ಹೊರಬರುವ ಸಂದರ್ಭದಲ್ಲಿ ಮನವಿ ನೀಡಲು ಬಂದವನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏ ಥೂ ಎಂದು ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮತ್ತೊಂದೆಡೆ ಬಿಜೆಪಿ&ಜೆಡಿಎಸ್ ಪ್ರತಿಪಕ್ಷಗಳು ವಿಡಿಯೋ ಇಟ್ಟುಕೊಂಡು ಸಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಅವರೊಂದಿಗೆ ಯಲ್ಲಮ್ಮನ ದರ್ಶನ ಪಡೆದುಕೊಂಡು ದೇವಾಲಯದಿಂದ ಹೊರಬರುವಾಗ ಈ ಟನೆ ಸಂಭವಿಸಿದೆ.
ಬೆಳಗಾವಿಯ ಮೂರು ಜಿಲ್ಲಾಧಿಕಾರಿ ಬದಲಾದರು ನನ್ನ ಕೆಲಸ ಆಗಲಿಲ್ಲ ಸರ್ ಎಂದು ವ್ಯಕ್ತಿಯೊಬ್ಬ ಏರುಧ್ವನಿಯಲ್ಲಿ ಕೂಗಿದ್ದಾನೆ. ಇದಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ "ನಾವು ಎಲ್ಲಿದ್ದೀವಿ ಗೊತ್ತಾಗಲ್ವಾ ನಿನಗೆ. ಥೂ ನೀನಾ ಇಲ್ಲಿ ಬಂದೂ ಇದನ್ನೇ ಮಾಡ್ತಿಯಾ' ಎಂದು ಗದರಿ ಮುಂದೆ ಸಾಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರತಿಪಕ್ಷಗಳ ಕೈಗೆ ಹೊಸ ಅಸ ಸಿಕ್ಕಂತಾಗಿದೆ.