ಸಿಎಂ ಗಮನಕ್ಕೆ ತಂದರೂ ಉರಳಗಲ್ಲು ಗ್ರಾಮಕ್ಕಿಲ್ಲ ಸೌಲಭ್ಯ

14sgr4
ಸಾಗರ ತಾಲೂಕಿನ ಉರಳಗಲ್ಲು ಹಾಗೂ ಕಾನೂರು ಗ್ರಾಮಸ್ಥರಿಗೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಗರಸಭೆ ಗಾಂ ಪ್ರತಿಮೆ ಎದುರು ಧರಣಿ ನಡೆಸಿದರು. ರಮೇಶ್ ಕೆಳದಿ, ಡಾ.ರಾಮಚಂದ್ರಪ್ಪ, ಕುಮಾರ್ ಗೌಡ, ಶಿವು, ಬದ್ರೇಶ್ ಇತರರಿದ್ದರು.
Published on

ಸಾಗರ: ಮೂಲ ಸೌಕರ್ಯ ವಂಚಿತ ಸಾಗರ ತಾಲೂಕಿನ ಉರಳಗಲ್ಲು ಹಾಗೂ ಕಾನೂರು ಗ್ರಾಮಸ್ಥರು ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಸಾಗರ ನಗರಸಭೆ ಗಾಂ ಪ್ರತಿಮೆ ಎದುರು ಧರಣಿ ನಡೆಸಿದರು. ಇಂದಿಗೂ ಉತ್ತಮ ರಸ್ತೆ, ಮನೆಗೆ ವಿದ್ಯುತ್ ಸಂಪರ್ಕ ಇಲ್ಲದ ಉರಳಗಲ್ಲು ಗ್ರಾಮ ದೇಶದಲ್ಲಿಯೇ ಮೂಲ ಸೌಲಭ್ಯ ವಂಚಿತ ಅತ್ಯಂತ ಹಿಂದುಳಿದ ಗ್ರಾಮ. ಯಾರಿಗೆ ಬಂತು ಸ್ವಾತಂತ್ರ್ಯ ಎಂಬುದನ್ನು ಚುನಾಯಿತ ಪ್ರತಿನಿಗಳು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳಲಿ. ಸತತ ಎರಡು ಬಾರಿ ಮುಳುಗಡೆಯಾಗಿ ಭೂಮಿ, ಮನೆ, ಆಸ್ತಿಯನ್ನು ಕಳೆದುಕೊಂಡು ಇಂದಿಗೂ ಹಕ್ಕುಗಳು ದೊರೆಯದೆ ಕತ್ತಲೆಯಲ್ಲಿದ್ದೇವೆ. ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದೇವೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖಂಡ ನಾಗರಾಜ್ ಉರುಳಗಲ್ಲು ದೂರಿದರು. ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಸ್ಥಳೀಯ ಶಾಸಕರು ಇಚ್ಛಾಶಕ್ತಿ ಪ್ರದರ್ಶಿಸಬೇಕು. ದೇಶವೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವಾಗ ಉರುಳುಗಲ್ ಮತ್ತು ಕಾನೂರು ಗ್ರಾಮಸ್ಥರು ಮೂಲ ಸೌಕರ್ಯಗಳಿಲ್ಲದೆ ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ. ಎರಡು ಬಾರಿ ಮುಳುಗಡೆಯಿಂದಾಗಿ ಈ ಪ್ರದೇಶದ ಜನ ಅಕ್ಷರಶಃ ಹೈರಾಣಾಗಿದ್ದಾರೆ. ಕ್ಷೇತ್ರದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ನಮಗೆ ಅಕೃತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ, ಕುಮಾರ್ ಗೌಡ, ಶಿವು, ಭದ್ರೇಶ್, ದೇವರಾಜ್, ಸೋಮಶೇಖರ್, ಚಂದ್ರ ಪೂಜಾರ್, ಕುಬೇರ, ಟಾಕಪ್ಪ, ಗಣಪತಿ, ಜಿನೇಶ್ ಇತರರಿದ್ದರು.

ಬಂಧನ-ಬಿಡುಗಡೆ ಉರಳಗಲ್ಲು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ರೈತ ಸಂಘ ನಡೆಸುತ್ತಿದ್ದ ಪ್ರತಿಭಟನಾನಿರತ ರೈತರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net