ಸಿಎಂ ಕಪ್ ಗೆದ್ದ ಗಿರಿಜಿಲ್ಲೆ ಬಾಲಕೀಯರು

22ydg08
Published on


ಯಾದಗಿರಿ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ನಡೆದ ರಾಜ್ಯ ಮಟ್ಟದ ಸಿಎಂ ಕಪ್ ಕ್ರೀಡಾಕೂಟದ ಖೋ,ಖೋ ಪಂದ್ಯಾವಳಿಯಲ್ಲಿ ಗಿರಿಜಿಲ್ಲೆ ಬಾಲಕಿಯರು ಪ್ರಥಮ ಸ್ಥಾನ ಪಡೆದಿದ್ದಾರೆ.


ತಾಲೂಕುಮ ಜಿಲ್ಲಾ ಮಟ್ಟದಲ್ಲಿ ಉತ್ತಮ ಕ್ರೀಡಾ ಸಾಧನೆ ಮೆರೆದ ಬಾಲಕಿಯರ ತಂಡ ಕಲಬುರಗಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಎಂಟ್ರಿ ಕೊಟ್ಟಿತ್ತು. ಮೈಸೂರು ನಗರದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಎದುರಾಳಿಗಳನ್ನು ಸುಲಭವಾಗಿ ಮಣಿಸಿದ ಕ್ರೀಡಾಳುಗಳು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.

ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಯಾದಗಿರಿ ತಂಡ 7-6 ಅಂಕಗಳಿಂದ ಬೆಳಗಾವಿ ವಿರುದ್ಧ ರೋಚಕ ಜಯ ಸಾಧಿಸಿದೆ. ವಿಜೇತ ತಂಡದಲ್ಲಿ ನಾಯಕಿ ಮಹೇಶ್ವರಮ್ಮ, ಚಂದನಾ, ರಾಜೇಶ್ವರಿ, ಅನಿತಾ, ವಾಲಿಬಾಯಿ, ಮೈತ್ರಮ್ಮ, ಮಯೂರಿ, ಪೂಜಾ, ಜ್ಯೋತಿ, ಮಮತಾ, ಲಕ್ಷ್ಮೀ, ಗಾಯತ್ರಿ, ಮಹಾಲಕ್ಷ್ಮೀ, ಮಹೇಶ್ವರಿ ಭಾಗವಹಿಸಿದ್ದರು. ಕೋಚರ್ಗಳಾಗಿ ಮಲ್ಲೇಶ ಎಸ್.ಕೆ.ನಾಯಕ್, ದೊಡಪ್ಪ ನಯಕ ತೆರಳಿದ್ದರು. ಸಾಧನೆಗೆ ಜಿಲ್ಲಾಡಳಿತ ಸೇರಿ ದೈಹಿಕ ಶಿಕ್ಷಣ ಅಧ್ಯಕ್ಷ ಹಣಮಂತ ಹೊಸಮನಿ, ತಂಡದ ವ್ಯವಸ್ಥಾಪಕ ವೆಂಕಟೇಶ್ ಚಂದನಕೇರಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net