ಸಿಇಟಿಯಲ್ಲಿ ಎಸ್‌ಆರ್‌ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

Untitled-0002
Published on

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಳೆದ ಏಪ್ರಿಲ್‌ನಲ್ಲಿ ಜರುಗಿದ್ದ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್‌ಗಳನ್ನು ಪ ಡೆದು ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಎನ್.ಮದನ್ ಕ್ರಮವಾಗಿ,ಪ್ರಾಕೃತಿಕ ಯೋಗ ವಿಜ್ಞಾನದಲ್ಲಿ 32ನೇ,ಪಶುವೈದ್ಯಕೀಯ 43,ಬಿಎಸ್ಸಿ ನಸಿರ್ಂಗ್ 43, ಬಿಎಸ್ಸಿ ಅಗ್ರಿ 54,ಬಿ.ಫಾರ್ಮಾ 69 ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ 448ನೇ ರ‌್ಯಾಂಕ್ ಪಡೆದಿದ್ದಾನೆ.
ಜೆಜೆಇ ಮೇನ್ಸ್‌ನಲ್ಲೂ ಶೇ.98.87 ಅಂಕ ಪಡೆದಿರುವ ಮದನ್, ಅಡ್ವಾನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾನೆ. ಇಂಜಿನಿಯ ರಿಂಗ್‌ನಲ್ಲಿ ಆರ್.ತಿರುಮಲ 1715ನೇ ರ‌್ಯಾಂಕ್ ಪಡೆದಿದ್ದು,ಇನ್ನೂ 31 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ರ‌್ಯಾಂಕ್‌ಗಳನ್ನು ಪಡೆದಿದ್ದಾರೆ. ಜೆ ಜೆಇ ಮೇನ್ಸ್‌ನ 53 ವಿದ್ಯಾರ್ಥಿಗಳಲ್ಲಿ ಅರ್ಹತೆಗಳಿಸಿದ 43 ವಿದ್ಯಾರ್ಥಿಗಳು,ಜೆಜೆಇ ಅಡ್ವಾನ್ಸ್ ಪರೀಕ್ಷೆ ಬರೆದಿದ್ದು,ಐಐಟಿಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.
ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ,ಕಾರ‌್ಯದರ್ಶಿ ಸುಜಾತಲಿಂಗಾರೆಡ್ಡಿ,ಆಡಳಿತಾಧಿಕಾರಿಗಳಾದ ಡಾ.ಟಿ.ಎಸ್.ರವಿ ಪ್ರಾಂಶುಪಾಲ ಎಸ್.ಜಿ.ಸತೀಶ್‌ನಾಯ್ಕ,ಉಪಪ್ರಾಂಶುಪಾಲ ಬಿ.ಮನೋಹರ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net