ಸಿಇಟಿಯಲ್ಲಿ ಎಸ್‌ಆರ್‌ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

CTD 15 MARULA SIDDANA GOWDA N -SRS-06
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈಚೆಗೆ ನಡೆದಿದ್ದ ಸಿಇಟಿ ಪರೀಕ್ಷೆಯಲ್ಲಿ ಅತ್ಯುತ್ತಮ ರ‌್ಯಾಂಕ್‌ಗಳನ್ನು ಪಡೆದು ಜಿ ಲ್ಲೆಗೆ ಹಾಗೂ ಕಾಲೇಜಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ತಿಳಿಸಿದೆ.

ವಿದ್ಯಾರ್ಥಿ ಎನ್.ಮರುಳಸಿದ್ದನಗೌಡ ಅವರು ಬಿಎಸ್ಸಿ ಅಗ್ರಿ ಮತ್ತು ಪಶುವೈದ್ಯಕೀಯ ವಿಭಾಗದಲ್ಲಿ ಕ್ರಮವಾಗಿ 92 ಹಾಗೂ 96ನೇ ರ‌್ಯಾಂಕ್ ಪಡೆದಿದ್ದಾರೆ. ಎಚ್.ಎಸ್.ಜಯಂತ್ ಇಂಜಿನಿಯರಿಂಗ್ ವಿಭಾಗದಲ್ಲಿ 137ನೇ ರ‌್ಯಾಂಕ್ ಪಡೆದಿದ್ದು,ಜೆಇಇ ಪರೀಕ್ಷೆಯಲ್ಲೂ ಉತ್ತಮ ಫಲಿ ತಾಂಶದ ನಿರೀಕ್ಷೆಯಲ್ಲಿದ್ದಾರೆ.
ಚಿನ್ಮಯ್ ಎಂ.ಗೌಡ ಕ್ರಮವಾಗಿ ಪ್ರಾಕೃತಿಕ ಯೋಗ ವಿಜ್ಞಾನ,ಪಶು ವೈದ್ಯಕೀಯ ವಿಭಾಗದಲ್ಲಿ ಕ್ರಮವಾಗಿ 140 ಹಾಗೂ 174ನೇ ರ‌್ಯಾಂಕ್ ಗಳಿಸಿದ್ದಾರೆ.

ಕೆ.ಎಂ.ಮಧುಸೂಧನ್ ಬಿಎಸ್ಸಿ ಅಗ್ರಿ ಮತ್ತು ಪಶು ವೈದ್ಯಕೀಯ ವಿಭಾಗದಲ್ಲಿ ಕ್ರಮವಾಗಿ 271 ಹಾಗೂ 282ನೇ ರ‌್ಯಾಂಕ್ ಪಡೆ ದಿದ್ದಾರೆ.
ಕಾಲೇಜಿನ ಇನ್ನೂ 31 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಉತ್ತಮ ರ‌್ಯಾಂಕ್‌ಗಳಿಸಿದ್ದಾರೆ. ಕಾಲೇಜು ಮತ್ತು ಜಿಲ್ಲೆಗೆ ಕೀರ್ತಿ ತಂದಿರುವ ಈ ಪ್ರತಿಭಾನ್ವಿತ ವಿದ್ಯಾರ್ಥಿಗಳ ನಡೆಗೆ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ,ಕಾರ‌್ಯದರ್ಶಿ ಸುಜಾತ ಲಿಂಗಾರೆಡ್ಡಿ ಹರ್ಷವ್ಯಕ್ತಪಡಿಸಿದ್ದಾ ರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net