ಸಿಇಟಿ,ಮೊದಲ ದಿನ 170 ವಿದ್ಯಾರ್ಥಿಗಳು ಗೈರು

CTD 18 CET--00004
Published on

ಚಿತ್ರದುರ್ಗ:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ದೇಶದಂತೆ ಗುರುವಾರ ನಗರದ ವಿವಿಧ 14 ಕೇಂದ್ರಗಳಲ್ಲಿ ಸಿಇಟಿ ಆರಂಭವಾಯಿ ತು. ಮೊದಲು ದಿನದ ಪರೀಕ್ಷೆಗೆ ನೋಂದಾಯಿಸಿದ್ದ 6456 ವಿದ್ಯಾರ್ಥಿಗಳ ಪೈಕಿ 6286 ವಿದ್ಯಾರ್ಥಿಗಳು ಹಾಜರಾಗಿದ್ದರು.
ಬೆಳಗ್ಗೆ ಜೀವ ಶಾಸ್ತ್ರ ಹಾಗೂ ಮಧ್ಯಾಹ್ನ ಗಣಿತಶಾಸ್ತ್ರದ ಪರೀಕ್ಷೆ ಜರುಗಿತು. ಏ.19ರಂದು ಬೆಳಗ್ಗೆ 10.30ರಿಂದ 11.50ರರವರೆಗೆ ಭೌತ ಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ವಿಷಯ ಪರೀಕ್ಷೆಗಳು ನಡೆಯಲಿವೆ ಎಂದು ಪಿಯು ಡಿಡಿ ಆರ್.ಪುಟ್ಟಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net