ಸಿಇಟಿ,713 ವಿದ್ಯಾರ್ಥಿಗಳು ಗೈರು

CTD 20 CET-02
Published on

ಚಿತ್ರದುರ್ಗ: ಜಿಲ್ಲೆಯ ಹನ್ನೊಂದು ಕೇಂದ್ರಗಳಲ್ಲಿ ಶನಿವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ, ಜೀವಶಾಸ್ತ್ರ ವಿಷಯಕ್ಕೆ 494 ವಿದ್ಯಾರ್ಥಿಗಳು ಹಾಗೂ ಗಣಿತ ವಿಷಯಕ್ಕೆ 219 ವಿದ್ಯಾರ್ಥಿಗಳು ಸೇರಿ 713 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಜೀವಶಾಸ್ತ್ರಕ್ಕೆ ನೋಂದಾಯಿಸಿದ್ದ 5483 ವಿದ್ಯಾರ್ಥಿಗಳ ಪೈಕಿ 4989 ವಿದ್ಯಾರ್ಥಿಗಳು ಹಾಜರಾಗಿದ್ದರು. ಗಣಿತಕ್ಕೆ ನೋಂದಣಿ ಆಗಿದ್ದ 5483 ವಿದ್ಯಾರ್ಥಿಗಳಲ್ಲಿ 5264 ವಿದ್ಯಾರ್ಥಿಗಳು ಹಾಜರಾಗಿದ್ದರು. ಭಾ ನುವಾರ ಬೆಳಗ್ಗೆ 10.30 ರಿಂದ 11.50ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net