ಸಿಆರ್‌ಪಿಎಫ್‌ನಿಂದ ಪಥಸಂಚಲನ

12Kglphoto2
Published on

ಕೊಳ್ಳೇಗಾಲ: 2023ರ ವಿಧಾನಸಭಾ ಚುನಾವಣೆಯ ಸಂಬಂಧ ಸೋಮವಾರ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲಿ ಸಿಆರ್‌ಪಿಎಫ್ ಯೋಧರು ಪಥಸಂಚಲನದ ಮೂಲಕ ಜನಜಾಗೃತಿ ಮೂಡಿಸಿದರು.


ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಭೀಮನಗರ, ಆನಂದಜ್ಯೋತಿ ಕಾಲನಿ, ನಾಯಕರ ಬೀದಿ, ಈದ್ಗಾ ಮೊಹಲ್ಲಾ ರಸ್ತೆ ಇನ್ನಿತರ ಬಡಾವಣೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಿಆರ್‌ಪಿಎಫ್ ಯೋಧರು ಜಾಥಾ ನಡೆಸಿದರು.
ಸಿಆರ್‌ಪಿಎಫ್ ಡೆಪ್ಯುಟಿ ಕಮಾಂಡೆಂಟ್ ನಯನ ನಂದಿ ಮಾತನಾಡಿ, ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಜನಜಾಗೃತಿ ಜಾಥಾ ನಡೆಸಲಾಗುತ್ತಿದೆ. ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ನಿಗಾ ವಹಿಸಲಾಗಿದೆ. ಪೊಲೀಸ್ ಇಲಾಖೆ ನೆರವಿಗೆ ಸಿಆರ್‌ಪಿಎಫ್ ಸದಾ ಇರಲಿದೆ ಎಂದರು.


ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಶಿಕವಾತ್ ಎಲ್.ಕಾರ್ತಿಕ್, ಸಿಬ್ಬಂದಿ ಪುನೀತ್, ನಾಗೇಶ್, ರಾಮನರೆಡ್ಡಿ, ಬ್ಯೂಟಿ, ಪಟ್ಟಣ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಚೇತನ್, ಹನುಮಂತ್ ಉಪ್ಪಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net