ಸಿಂಹದ ಮೂರು ಮರಿ ವೀಕ್ಷಣೆಗೆ ಮುಕ್ತ

25 (2)
Published on

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಸಿಂಹದ ಮೂರು ಮರಿಗಳನ್ನು ಗುರುವಾರ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು.

2022ರ ಆಗಸ್ಟ್ 5ರಂದು ಮೃಗಾಲಯದ ಗಂಡು ಸಿಂಹ ‘ರಾಜು’ ಮತ್ತು ಹೆಣ್ಣು ಸಿಂಹ ‘ನಿರ್ಭಯ’ಳಿಗೆ ಮೂರು (2 ಗಂಡು, 1 ಹೆಣ್ಣು) ಮರಿ ಜನಿಸಿದ್ದವು. ಪ್ರಸ್ತುತ ಈ ಮರಿಗಳಿಗೆ 5 ತಿಂಗಳು. ಇವುಗಳನ್ನು ಸಾರ್ವಜನಿಕ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮುಕ್ತಗೊಳಿಸಿದರು.

ಮೇಯರ್ ಶಿವಕುಮಾರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net