ಸಿಂಧುಘಟ್ಟದಲ್ಲಿ ಮೊಹರಂ ಆಚರಣೆ

ಕೆ.ಆರ್.ಪೇಟೆ: ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಮೊಹರಂ ಕಡೇ ದಿನದ ಅಂಗವಾಗಿ ಬಾಬಯ್ಯನ ಹಬ್ಬ ಆಚರಿಸಿದರು. ಮುಖಂಡರಾದ ಆರ್.ಟಿ.ಓ ಮಲ್ಲಿಕಾರ್ಜುನ್, ಈರಣ್ಣ, ಗಂಜಿಗೆರೆ ಮಹೇಶ್, ಇಮ್ರಾನ್‌ಪಾಷಾ, ಮಹಮದ್ ಸಾಧಿಕ್ ಇತರರು ಇದ್ದರು.
ಕೆ.ಆರ್.ಪೇಟೆ: ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಮೊಹರಂ ಕಡೇ ದಿನದ ಅಂಗವಾಗಿ ಬಾಬಯ್ಯನ ಹಬ್ಬ ಆಚರಿಸಿದರು. ಮುಖಂಡರಾದ ಆರ್.ಟಿ.ಓ ಮಲ್ಲಿಕಾರ್ಜುನ್, ಈರಣ್ಣ, ಗಂಜಿಗೆರೆ ಮಹೇಶ್, ಇಮ್ರಾನ್‌ಪಾಷಾ, ಮಹಮದ್ ಸಾಧಿಕ್ ಇತರರು ಇದ್ದರು.
Published on

ಕೆ.ಆರ್.ಪೇಟೆ: ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಮೊಹರಂ ಕಡೇ ದಿನದ ಅಂಗವಾಗಿ ಹಸೇನ್, ಹುಸೇನರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಹಿಂದೂ-ಮುಸ್ಲಿಮರು ಭಾವೈಕ್ಯತೆಯ ಸಂಕೇತವಾಗಿರುವ ಬಾಬಯ್ಯನ ಹಬ್ಬವನ್ನು ಆಚರಿಸಿದರು.

ಸಿಂಧುಘಟ್ಟದ ಕೆರೆ ಬೀದಿಯಲ್ಲಿರುವ ಬಾಬಯ್ಯನ ಗುಡಿ ಬಳಿ ತೆಗೆದ ಕೊಂಡಕ್ಕೆ ಭಾನುವಾರ ತಡರಾತ್ರಿ ಅಗ್ನಿ ಸ್ಪರ್ಶ ಮಾಡಿ, ಬಾಬಯ್ಯನ ಗುಡಿಯಲ್ಲಿ ಹಸೇನ್-ಹುಸೇನ್‌ದೇವರ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.

ಬಾಬಯ್ಯ ದೇವರಿಗೆ ನೈವೇದ್ಯವಾಗಿ ಕಡ್ಲೆ ಪುರಿ ಅರ್ಪಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಸೇನ್-ಹುಸೇನ್ ದೇವರ ಮೆರವಣಿಗೆ ಮಾಡಲಾಯಿತು. ಬಾಬಯ್ಯ ದೇವರು ಭಕ್ತಾಧಿಗಳ ಮನೆ ಮುಂದೆ ಹೋದಾಗ ಹಿಂದು ಮತ್ತು ಮುಸ್ಲಿಂ ಸಮುದಾಯದ ಭಕ್ತಾಧಿಗಳು ತುಂಬಿದ ಕೊಡದಲ್ಲಿ ನೀರು ಹಾಕಿ ಬಾಬಯ್ಯನ ಪಾದ ಸ್ಪರ್ಷ ಮಾಡಿ ಪುನೀತರಾದರು.

ಬಾಬಯ್ಯನ ಹಬ್ಬದ ಅಂಗವಾಗಿ ದಸ್ತಗೀರ್ ಸಾಬ್ ಮೊಮ್ಮಗ ಇಮ್ರಾನ್‌ಪಾಷಾ ಚಾವಟಿ ಬಾರಿಸಿಕೊಂಡು ಕುರಾನ್ ಪಠಣ ಮಾಡಿದರು. ಹಬ್ಬ ಆಚರಣಾ ಸಮಿತಿಯ ಮುಖಂಡ ಈರಣ್ಣ ಅವರು ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದ್ದರು.

ಹರಕೆ ಹೊತ್ತವರು ಮೈಗೆ ಮಸಿ ಬಳಿದುಕೊಂಡು ಕೊಂಡದ ಸುತ್ತಲೂ ಕುಣಿದು ಸಂಭ್ರಮಿಸಿದರು. ಮತ್ತೆ ಕೆಲವರು ಹುಲಿ ವೇಷ ತೊಟ್ಟು ನೆರದವರನ್ನ ರಂಜಿಸಿದರು. ಹಸೇನ್-ಹುಸೇನ್ ಎರಡೂ ದೇವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಬಳಿಕ ಕೆರೆಕೋಡಿ ಬೀದಿಯಲ್ಲಿರುವ ಬಾಬಯ್ಯನ ದೇವಾಲಯಕ್ಕೆ ಆಗಮಿಸಿತು. ಈ ವೇಳೆ ಹರಕೆ ಹೊತ್ತ ಭಕ್ತಾಧಿಗಳು ಬಾಬಯ್ಯನ ಕೊಂಡಕ್ಕೆ ಎಳ್ಳು, ಕೊಬ್ಬರಿ, ಹರಳಿನ ಹರಕೆ ಸಮರ್ಪಿಸಿದರು.

ಮುಖಂಡರಾದ ಗಂಜಿಗೆರೆ ಮಹೇಶ್, ಈರಣ್ಣ, ಮಹಮದ್ ಸಾಧಿಕ್, ಅನ್ಸರ್‌ಪಾಷಾ, ಗಂಜಿಗೆರೆ ಮಹೇಶ್, ಆಯಾಜ್, ದಸ್ತಗಿರ್ ಪಾಷಾ, ಅನ್ಸರ್, ನೂರ್ ಅಹಮದ್ ಸೇರಿದಂತೆ ಹಲವು ಗಣ್ಯರು ಸಾವಿರಾರು ಭಕ್ತಾಧಿಗಳು ಬಾಬಯ್ಯನ ಹಬ್ಬದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net