ಸಿಂದಗಿ ತಾಲೂಕಿನ ಎರಡು ಗ್ರಾಮ ಪಂಚಾಯಿತಿ‌ ಚುನಾವಣೆಗೆ ಬ್ರೇಕ್

Gramayana Logo
Published on

ವಿಜಯಪುರ: ಗ್ರಾಪಂ ಚುನಾವಣೆ ಕಣ ರಂಗೇರುತ್ತಿರುವ ಹೊತ್ತಿನಲ್ಲಿಯೇ ಜಿಲ್ಲೆಯ ಎರಡು ಗ್ರಾಪಂಗಳ ಚುನಾವಣೆ ಮುಂದೂಡುವಂತೆ ರಾಜ್ಯ ಚುನಾವಣೆ ಆಯೋಗ ಡಿ. 10 ರಂದು ಆದೇಶಿಸಿದೆ.

ಸಿಂದಗಿ ತಾಲೂಕಿನ ಬಂದಾಳ ಹಾಗೂ ಕನ್ನೊಳ್ಳಿ ಗ್ರಾಪಂಗಳ ಚುನಾವಣೆ ಮುಂದೂಡಲ್ಪಟ್ಟಿವೆ. ಓತಿಹಾಳ ಗ್ರಾಮವನ್ನು ಕನ್ನೊಳ್ಳಿ ಗ್ರಾಪಂಗೆ ಸೇರ್ಪಡೆ ಮಾಡಿದ ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ದಾಖಲಾಗಿದೆ. ಈ ಬಗ್ಗೆ ಬೆಳಗಾವಿ ಆಯಕ್ತರನ್ನು ವಿಚಾರಿಸಲಾಗಿ ಹೈಕೋರ್ಟ್ ಮರು ಪರಿಶೀಲನೆಗೆ ಆದೇಶಿಸಿದೆ. ಮುಂದುವರಿದು ಡಿ. 14 ರಂದು ವಿಚಾರಣೆಗೆ ದಿನ ನಿಗದಿಗೊಳಿಸಲಾಗಿದ್ದು ಅಂತಿಮ ಆದೇಶದವರೆಗೂ ಈ ಎರಡು ಗ್ರಾಪಂಗಳ ಚುನಾವಣೆ ಮುಂದೂಡುವಂತೆ ಚುನಾವಣೆ ಆಯೋಗ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net