ಸಿಂದಗಿ ಉಪ ಚುನಾವಣೆಗೆ ಹಾಲುಮತಸ್ಥರಿಗೆ ಟಿಕೆಟ್ ನೀಡಿ: ಸೋಮೇಶ್ವರ ಸ್ವಾಮೀಜಿ

20210227_105617
Published on

ವಿಜಯಪುರ: ಸಿಂದಗಿ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಹಾಲುಮತ ಸಮಾಜಕ್ಕೆ ಆದ್ಯತೆ ನೀಡಬೇಕೆಂದು ಮಖಣಾಪುರದ ಶ್ರೀ ಸೋಮೇಶ್ವರ ಸ್ವಾಮೀಜಿ ಮನವಿ ಮಾಡಿದರು.

ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಜಿಲ್ಲೆಯಲ್ಲಿ ಹಾಲುಮತ ಸಮುದಾಯಕ್ಕೆ ಸೇವೆ ಮಾಡಲು ಅವಕಾಶ ಸಿಕ್ಕಿಲ್ಲ. ಟಿಕೆಟ್ ನೀಡಿರಬಹುದು ಆದರೆ ಸೇವೆಗೆ ಅವಕಾಶ ಸಿಗದ ಕಾರಣ ಇನ್ನೊಮ್ಮೆ ಎಲ್ಲ ಪಕ್ಷಗಳು ಸೇರಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಯಾವುದೇ ಪಕ್ಷ ಆಗಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕರೂ ಚುನಾವಣೆ ತಯಾರಿಗೆ ಸಮಯಾವಕಾಶ ಸಿಗಲಿಲ್ಲ ಎಂದರು.

ಜಿಲ್ಲೆಯಲ್ಲಿ 4.5 ಲಕ್ಷ ಜನ ಹಾಲುಮತ ಸಮುದಾಯದವರಿದ್ದೇವೆ. ಕೇವಲ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಾಲದು. ವಿಧಾನ ಸಭೆ ಚುನಾವಣೆಗೂ ಅವಕಾಶ ಕಲ್ಪಿಸಬೇಕು. ಕಳೆದ ಬಾರಿ ಸಿಂದಗಿಯ ಮಲ್ಲಣ್ಣ ಸಾಲಿ ಅವರನ್ನು ಗೆಲ್ಲಿಸದೇ ಇರುವುದು ನಮ್ಮದೇ ತಪ್ಪು. ಈ ಬಾರಿಯಾದರೂ ಅವಕಾಶ ಕಲ್ಪಿಸಬೇಕು ಎಂದರು.

ಹುಲಜಂತಿಯ ಮಾಳಿಂಗರಾಯ ಮಹಾರಾಜ ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡದೇ ಹೋದರೆ ಪಕ್ಷೇತರವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು.

ರವಿ ಕಿತ್ತೂರ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಕರಿಯಪ್ಪ ಬಸ್ತಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net