ಸಿ.ಡಿ.ಮಾದೇವ ಅವಿರೋಧ ಆಯ್ಕೆ

Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಿ.ಡಿ.ಮಾದೇವ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಳಿಗಿರಿರಂಗನಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 7 ಸದಸ್ಯರಿದ್ದು, ಹಿಂದಿನ ಅಧ್ಯಕ್ಷ ಪ್ರದೀಪ್‌ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಪುರಾಣಿಪೋಡಿನ ಸದಸ್ಯ ಸಿ.ಡಿ.ಮಾದೇವ ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ ಘೋಷಿಸಿದರು.

ಸಿ.ಡಿ.ಮಾದೇವ ಮಾತನಾಡಿ, ಪುರಾಣಿಪೋಡಿನ ನಿವಾಸಿಗೆ ಇದೇ ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನ ದೊರೆತಿದೆ. ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರ ವಿಶ್ವಾಸಗಳಿಸಿ ಕರ್ತವ್ಯ ನಿರ್ವಹಿಸುತ್ತೇನೆ. ಪ್ರವಾಸಿ ತಾಣವಾದ ಬಿಳಿಗಿರಿರಂಗನಬೆಟ್ಟದಲ್ಲಿ ಮೂಲ ಸೌಕರ್ಯಗಳಾದ ಸ್ವಚ್ಛತೆ, ಕುಡಿಯುವ ನೀರು ಮುಂತಾದ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತೇನೆಂದು ತಿಳಿಸಿದರು.

ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ಎಸ್ ಪ್ರದೀಪ್ ಕುಮಾರ್, ಬಿ.ಎನ್.ಬಸವಣ್ಣ, ಸಾಕಮ್ಮ ನಾಗೇಶ್, ಕಮಲಮ್ಮ, ಮಾದಮ್ಮ, ರಂಗಮ್ಮ ಗ್ರಾಮದ ಯಜಮಾನರಾದ ಎಚ್.ನಾಗೇಶ್, ಮುಖಂಡರಾದ ಗಿರಮಾದೇಗೌಡ, ಸೋಲಿಗ ಕುಸುಮಬಾಲೆ ಸಂಘದ ಅಧ್ಯಕ್ಷ ಬಸವರಾಜು, ತಾಲೂಕು ಗಿರಿಜನ ಅಭಿವೃದ್ಧಿ ಸಂಘ ಅಧ್ಯಕ್ಷ ದಾಸೇಗೌಡ, ಮುಖಂಡರಾದ ಆನಂದ್, ನಾಗರಾಜು, ಸಂತೋಷ್, ಬಿ.ಆರ್.ರಂಗನಾಥ, ಸಿದ್ದು, ಪಿಡಿಒ ಕಾವ್ಯಾ, ಕಾರ್ದರ್ಶಿ ಟಿ.ಎನ್.ನಟರಾಜು ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net