ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ ಆಭರಣಗಳ ಪ್ರದರ್ಶನ ಚಾಲನೆ

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ ಆಭರಣಗಳ ಪ್ರದರ್ಶನ ಚಾಲನೆ
Published on

ಹಾಸನ: ನಗರದ ಅಶೋಕ ಹೋಟೆಲ್‌ನಲ್ಲಿ ನಾಲ್ಕು ದಿನಗಳ ಕಾಲ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಚಾಲನೆ ನೀಡಿದರು.

ಜ್ಯುವೆಲ್ಲರ್ಸ್ ಸ್ಟೋರ್ ಮ್ಯಾನೆಜರ್ ತೇಜಸ್ ಮಾಧ್ಯಮದೊಂದಿಗೆ ಮಾತನಾಡಿ, ಈ ಪ್ರದರ್ಶನವು ಸಾಂಪ್ರದಾಯಿಕ ಮತ್ತು ಸಮಕಾಲೀನವಾದ ಆಭರಣಗಳ ಸಂಗ್ರಹದ ವಿಶಿಷ್ಟ ಶ್ರೇಣಿಯೊಂದಿಗೆ ಶುದ್ಧ ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮ ಕರಕುಶಲತೆಯೊಂದಿಗೆ ಸಿದ್ಧಪಡಿಸಲಾದ ಮನಮೋಹಕ ಆಭರಣಗಳು ಇಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು

ಕಳದ ಹಲವು ವರ್ಷದಿಂದ ಸಿ.ಕೃಷ್ಣಯ್ಯ ಚೆಟ್ಟಿ ಅವರು ಚಿನ್ನಾಭರಣಗಳ ಮಾರಾಟ ಮಾಡಿಕೊಂಡು ಬಂದಿದ್ದು, ನಮ್ಮ ಜ್ಯುವೆಲ್ಲರ್ಸ್‌ನಲ್ಲಿ ವಿವಿಧ ಆಭರಣದ ಸಂಗ್ರಹದ ವೈಢೂರ್ಯ, ಸಿಟ್ರಿನ್, ಮುತ್ತುಗಳು, ಹರಳು, ಮಾಣಿಕ್ಯಗಳಂತಹ ಅಪರೂಪವಾದ ವಜ್ರಗಳೊಂದಿಗೆ ಆಕರ್ಷಕ ವಿನ್ಯಾಸಗಳನ್ನು ಹೊಂದಿವೆ. ಈ ಮೂಲಕ ಸೊಬಗು ಮತ್ತು ಕ್ಲಾಸಿಕ್ ಶೈಲಿಯನ್ನು ನಿಮಗೆ ತಂದುಕೊಡಲಿವೆ. ಕೈಗೆಟುಕುವ ಬೆಲೆಯ ಬೆಳ್ಳಿ ಆಭರಣಗಳೊಂದಿಗೆ ಫ್ಯಾಶನ್ ಮತ್ತು ಉದ್ದೇಶದಿಂದ ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಇದೆ ವೇಳೆ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ನ ಸ್ಟೋರ್ ಮ್ಯಾನೆಜರ್ ಕೆ.ಕೆ. ಪ್ರಸಾದ್, ಸೈಯದ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಉದಯಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net