ಸಿ.ಎಸ್. ಮುತ್ತಿನಪೆಂಡಿಮಠ ಪ್ರತಿಷ್ಠಾನದಿಂದ ಶಿಬಿರ ಆಯೋಜನೆ

24-gdg-3
Published on

ಗದಗ: ಮಾಜಿ ಶಾಸಕ ದಿ. ಸಿ.ಎಸ್. ಮುತ್ತಿನಪೆಂಡಿಮಠ ಅವರ 93ನೇ ಜನ್ಮದಿನ, ಸಿ.ಎಸ್. ಮುತ್ತಿನಪೆಂಡಿಮಠ ಪ್ರತಿಷ್ಠಾನದ ಉದ್ಘಾಟನೆ ನಿಮಿತ್ತ ಅಂಗವಾಗಿ ಶುಕ್ರವಾರ ನಗರದ ರೋಟರಿ ಐಕೇರ್ ಸೆಂಟರ್​ದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ 80 ಕ್ಕೂ ಹೆಚ್ಚು ಜನರು ನೇತ್ರ ತಪಾಸಣೆ ಮಾಡಿಸಿಕೊಂಡರು.

ಶಿಬಿರಕ್ಕೆ ಚಾಲನೆ ನೀಡಿದ ಹಿರಿಯ ರೋಟೇರಿಯನ್ ಡಾ. ರಾಜಶೇಖರ ಬಳ್ಳಾರಿ, ರೋಟರಿ ವೆಲ್​ಫೇರ್ ಸೊಸೈಟಿಯಿಂದ ಪ್ರತಿ ತಿಂಗಳು ಶಿಬಿರವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಇದೀಗ ಮುತ್ತಿನಪೆಂಡಿಮಠ ಅವರ 93ನೇ ಜನ್ಮದಿನ ಹಾಗೂ ಪ್ರತಿಷ್ಠಾನದ ಉದ್ಘಾಟನೆ ನೆಪದಲ್ಲಿ ಹಮ್ಮಿಕೊಂಡ ಸಮಾಜಮುಖಿ ಕಾರ್ಯ ಹೀಗೆಯೇ ಮುಂದುವರೆಯಲಿ ಎಂದರು.

ರೋಟರಿ ವೆಲ್​ಫೇರ್ ಸೊಸೈಟಿ ಅಧ್ಯಕ್ಷ ಶ್ರೀಧರ ಸುಲ್ತಾನಪೂರ ಮಾತನಾಡಿದರು. ವೇದಿಕೆಯ ಮೇಲೆ ಡಾ. ರಾಧಿಕಾ ಬಳ್ಳಾರಿ, ಪ್ರತಿಷ್ಠಾನದ ಅಧ್ಯಕ್ಷ ವಸಂತ ಮೇಟಿ, ಸಹ ಕಾರ್ಯದರ್ಶಿ ಸಂಗಮೇಶ್ವರ ಬಂಗಾರಶೆಟ್ಟರ, ಸದಸ್ಯರಾದ ವಿಜಯಾನಂದ ಮುತ್ತಿನಪೆಂಡಿಮಠ, ಲತಾ ಮುತ್ತಿನಪೆಂಡಿಮಠ, ಈಶ್ವರಸಾ ಮೇರವಾಡೆ, ಜಾಕೀರಹುಸೇನ್ ಮುಜಾವರ ಉಪಸ್ಥಿತರಿದ್ದರು.

ಸುನಂದಾ ಮಾಳೇಕೊಪ್ಪಮಠ, ವಿದ್ಯಾರಾಣಿ ಚಂದಾವರಿ, ವಿಜಯಲಕ್ಷ್ಮೀ ಬಿರಾದಾರ, ಸುಮಂಗಲಾ ಹಿರೇಮಠ, ಜಯಶೀಲಾ ಯರಲಕಟ್ಟಿಮಠ, ಸಂಧ್ಯಾ ಪೊತ್ನೀಸ್ ಉಪಸ್ಥಿತರಿದ್ದರು. ಬಾಲಕೃಷ್ಣ ಕಾಮತ್ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net