ಸಿ.ಎಸ್.ಪುಟ್ಟರಾಜು ಉಮೇದುವಾರಿಕೆ ಸಲ್ಲಿಕೆ

18_04_Mdy_02(A(Namapathra)
Published on

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎಸ್.ಪುಟ್ಟರಾಜು ಮಂಗಳವಾರ ಅಪಾರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಉಮೇದುವಾರಿಕೆ ಸಲ್ಲಿಸಿದರು.


ಪಟ್ಟಣದ ಮಹಾಕಾಳೇಶ್ವರಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು, ವಿವಿಧ ಜಾನಪದ ಕಲಾ ತಂಡಗಳಾದ ನಂದಿಕುಣಿತ, ಡೊಳ್ಳು ಕುಣಿತ, ವೀರಭದ್ರ ಕುಣಿತ, ತಮಟೆ ಮತ್ತು ಮಂಗಳವಾದ್ಯಗಳ ಸದ್ದಿನೊಡನೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ಪತ್ನಿ ನಾಗಮ್ಮ, ಪುತ್ರ ಶಿವರಾಜು ಜತೆಯಲ್ಲಿ ನಾಮಪತ್ರ ಸಲ್ಲಿಸಿದರು.


ದಾರಿಯುದ್ದಕ್ಕೂ ಜೆಡಿಎಸ್ ಕಾರ್ಯಕರ್ತರು ಪುಟ್ಟರಾಜು ಅವರಿಗೆ ಜೈಕಾರ ಕೂಗಿ, ಪಟಾಕಿಗಳನ್ನು ಸಿಡಿಸಿ ಗೆಲುವಿಗೆ ಶುಭ ಹಾರೈಸಿದರು. ಮೆರವಣಿಗೆಯೊಂದಿಗೆ ತಾಲೂಕು ಕಚೇರಿಗೆ ಆಗಮಿಸಿದ ಪುಟ್ಟರಾಜು ಅವರಿಗೆ ಜೆಡಿಎಸ್ ಕಾರ್ಯಕರ್ತರು ಕ್ರೇನ್ ಮೂಲಕ ಬೃಹತ್ ಗಾತ್ರದ ಕೊಬ್ಬರಿ ಹಾರ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net