ಸಿ.ಎಸ್. ಪಾಟೀಲ ಸೇವೆ ಅನನ್ಯ

3 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರೊ. ಸಿ.ಎಸ್. ಪಾಟೀಲ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಇನ್ನಷ್ಟು ಅಗತ್ಯವಿದ್ದು, ಕೆಐಎಲ್‌ಪಿಎಆರ್ ಸಂಸ್ಥೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುವಂತೆ ಪಾಟೀಲ ಅವರಿಗೆ ಮನವಿ ಮಾಡುತ್ತೇನೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಆವರಣದ ಸುವರ್ಣ ಮಹೋತ್ಸವ ಭವನದಲ್ಲಿ ಪ್ರೊ. ಸಿ.ಎಸ್. ಪಾಟೀಲ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾನೂನು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಎಸ್. ಪಾಟೀಲ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನರ ಹಿತದೃಷ್ಟಿಯಿಂದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ (ಕೆಐಎಲ್‌ಪಿಎಆರ್) ಸಂಸ್ಥೆ ಜವಾಬ್ದಾರಿ ವಹಿಸಿಕೊಳ್ಳಬೇಕು. ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ಸಂಸ್ಥೆಯಲ್ಲಿ ಬಹಳಷ್ಟು ಅವಕಾಶಗಳಿವೆ. ಸಿ. ಎಸ್. ಪಾಟೀಲ ಸಹಿತ ಸಹಿತ 12 ತಜ್ಞರು 20 ಮಸೂದೆಗಳ ತಯಾರಿಸಿದ್ದರು. ಈ ಪೈಕಿ 12 ಕಾಯ್ದೆಗಳಾಗಿವೆ. 4 ಮಸೂದೆಗಳನ್ನು ಈಚೆಗೆ ಸಾರ್ವಜನಿಕ ವಲಯಕ್ಕೆ ಚರ್ಚೆಗೆ ಬಿಡಲಾಗಿದೆ ಎಂದರು.
ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ಮಾತನಾಡಿ, ಅಮೆರಿಕದಲ್ಲಿ ಜ್ಯೂರಿ ನೇಮಕ ವ್ಯವಸ್ಥೆ ಇದೆ. ಜ್ಯೂರಿಸ್ಟ್ ನೇಮಕದಿಂದ ಪಂಡಿತರಿಗೆ, ಜ್ಞಾನಿಗಳಿಗೆ ಗೌರವ ಕೊಟ್ಟಂತಾಗುತ್ತದೆ ಎಂದರು.
ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ಎಸ್.ಆರ್. ಬನ್ನೂರಮಠ ಮಾತನಾಡಿದರು. ಸನ್ಮಾನಿ ಸ್ವೀಕರಿಸಿದ ಪ್ರೊ. ಸಿ.ಎಸ್. ಪಾಟೀಲ ಮಾತನಾಡಿ, ಸಚಿವ ಎಚ್.ಕೆ. ಪಾಟೀಲ ಆಹ್ವಾನ ಒಪ್ಪಿಕೊಂಡಿರುವುದಾಗಿ ತಿಳಿಸಿ, ವಿದ್ಯಾರ್ಥಿಗಳ ಅಭಿನಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾನೂನು ವಿವಿ ಉಪಕುಲಪತಿ ಡಾ. ಸಿ. ಬಸವರಾಜು ಅಭಿನಂದನಾ ಪರ ಮಾತನಾಡಿದರು. ವಿಜಯಕುಮಾರ ಪಾಟೀಲ, ಪೂರ್ಣಿಮಾ ದೇವರಮನಿ, ಬಸವಪ್ರಭು ಹೊಸಕೇರಿ, ಕೆ.ಬಿ. ನಾವಲಗಿಮಠ, ಪ್ರೊ. ಲೋಹಿತ ನಾಯ್ಕರ್, ಜೆ.ಎಂ. ಗಂಗಾಧರ, ಮಹೇಶ ಹೆಬ್ಬಾಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net