ಸಿ.ಎಂ.ನರಸಿಂಹಮೂರ್ತಿಗೆ ಶಿವಗಂಗರಂಗ ಪ್ರಶಸ್ತಿ

Published on

ಚಾಮರಾಜನಗರ: ಬೆಂಗಳೂರಿನ ರಂಗಮಂಡಲ ಸಂಸ್ಥೆಯು ಶಿವಗಂಗ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಮಕ್ಕಳ ರಂಗ ಉತ್ಸವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೆ.ಬ. ರಾಮಲಿಂಗ ಶೆಟ್ಟಿ ಅವರು ರಂಗಕರ್ಮಿ ಹಾಗೂ ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರಿಗೆ ಸಿವಗಂಗ ರಂಗ ಪ್ರಶಸ್ತಿ ಪ್ರದಾನ ಮಾಡಿದರು.

ಈ ವೇಳೆ ರಂಗಕರ್ಮಿ ಸಿ.ಕೆ.ಗುಂಡಣ್ಣ, ನರೇಂದ್ರಬಾಬು, ರಂಗಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸುಭದ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್, ಸುಗ್ಗಿಮಗ್ಗೆ ಸಂಸ್ಥೆಯ ನೇತ್ರಾವತಿ, ಸ್ನೇಹ ಸೇವಾ ಫೌಂಡೇಶನ್ ಅಧ್ಯಕ್ಷೆ ಸೌಭಾಗ್ಯ, ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net