ಸಿ.ಆರ್.ಸೀಮಾಗೆ ಪ್ರತಿಭಾ ಪುರಸ್ಕಾರ

25 ckm 7
ಚಿಕ್ಕಮಗಳೂರು ಎಂಎಲ್‌ಎAಎನ್ ಶಿಕ್ಷಣ ಮಹಾವಿದ್ಯಾಲಯದ ಸಿ.ಆರ್.ಸೀಮಾ ಬಿ.ಇಡಿ ಶಿಕ್ಷಣದಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ೬ನೇ ರ‍್ಯಾಂಕ್ ಪಡೆದಿದ್ದು, ಅವರನ್ನು ಶ್ರೀ ಪಾರ್ವತಿ ಮಹಿಳಾ ಮಂಡಳಿ ಸದಸ್ಯೆಯರು ಅಭಿನಂದಿಸಿದರು. ಶ್ಯಾಮಲಾ, ಭವಾನಿ ವಿಜಯಾನಂದ, ಮಂಜುಳಾ ಮಹೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬಿ.ಇಡಿ ಶಿಕ್ಷಣದಲ್ಲಿ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ೬ನೆಯ ರ‍್ಯಾಂಕ್ ಪಡೆದ ಸಿ.ಆರ್.ಸೀಮಾ ಅವರನ್ನು ಶ್ರೀಪಾರ್ವತಿ ಮಹಿಳಾ ಮಂಡಳಿ ಗೌರವಿಸಿದೆ.

ಮಂಡಳಿ ಸದಸ್ಯೆ ಶ್ಯಾಮಲಾ ಮತ್ತು ರಮೇಶ್ ಅವರ ಪುತ್ರಿ ಸೀಮಾ ನಗರದ ಎಂಎಲ್‌ಎAಎನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದು, ಪ್ರಸಕ್ತ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ.೯೧.೭ ಅಂಕಗಳಿಸಿ ಕಾಲೇಜಿಗೆ ೬ನೆಯ ರ‍್ಯಾಂಕ್ ತಂದು ಕೊಟ್ಟಿದ್ದಾರೆ ಎಂದು ಮಂಡಳಿ ಅಧ್ಯಕ್ಷೆ ಸುಮಿತ್ರಾಶಾಸ್ತಿç ಅಭಿನಂದಿಸಿದರು.

ಕಾರ್ಯದರ್ಶಿ ಭವಾನಿ ವಿಜಯಾನಂದ, ಉಪಾಧ್ಯಕ್ಷರಾದ ಮಂಜುಳಾ ಮಹೇಶ್, ಶೈಲಾ ಬಸವರಾಜ್, ಖಜಾಂಚಿ ಸೌಭಾಗ್ಯ ಜಯಣ್ಣ, ಸದಸ್ಯರಾದ ರೇಖಾ ಪ್ರಸನ್ನ, ಗೀತಾಬಾಲಿ, ಸರ್ವಮಂಗಳಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net