ಸಾಹಿತ್ಯಾತ್ಮಕ ಚಟುವಟಿಕೆಗಳು ಬಾಂಧವ್ಯ ಮೂಡಿಸುತ್ತವೆ

25 ckm 5
ಚಿಕ್ಕಮಗಳೂರು ಕೋಟೆ ಸಮೀಪ ವಾಟರ್‌ಟ್ಯಾಂಕ್ ಉದ್ಯಾನವನದಲ್ಲಿ ಕಸಾಪ ತಾಲೂಕು, ನಗರ ಘಟಕದಿಂದ ಕನ್ನಡ ರಾಜ್ಯೋ ತ್ಸವ ಪ್ರಯುಕ್ತ ಆಯೋಜಿಸಿದ್ದ ಜಾನಪದ ರಸಪ್ರಶ್ನೆ ಹಾಗೂ ಪದಾಧಿಕಾರಿಗಳ ಸೇವಾದೀಕ್ಷಾ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಟಿವಿ, ಮೊಬೈಲ್‌ಗಳು ಮನುಷ್ಯನನ್ನು ಒಂಟಿಯಾಗಿಸಿದರೆ, ಗಾದೆ, ಒಗಟು, ಸಾಹಿತ್ಯ ಚಟುವಟಿಕೆಗಳು ಪರಸ್ಪರ ಬೆಸೆಯುವ ಕಾರ್ಯದಲ್ಲಿ ತೊಡಗಿಸಿ ಪ್ರತಿಯೊಬ್ಬರನ್ನು ಒಗ್ಗೂಡಿಸುವ ಮಹತ್ತರ ಪಾತ್ರ ನಿರ್ವಹಿಸುತ್ತವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ನಗರದ ಕೋಟೆ ಸಮೀಪ ವಾಟರ್‌ಟ್ಯಾಂಕ್ ಉದ್ಯಾನವನದಲ್ಲಿ ಕಸಾಪ ತಾಲೂಕು, ನಗರ ಘಟಕದಿಂದ ಕನ್ನಡ ರಾಜ್ಯೋ ತ್ಸವ ಪ್ರಯುಕ್ತ ಆಯೋಜಿಸಿದ್ದ ಜಾನಪದ ರಸಪ್ರಶ್ನೆ ಹಾಗೂ ಪದಾಧಿಕಾರಿಗಳ ಸೇವಾದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳ ಸಂಖ್ಯೆ ಕ್ಷೀಣಿಸುತ್ತಿವೆ. ಮೊದಲೆಲ್ಲಾ ಸಹಭೋಜನ, ಶುಭ ಸಮಾರಂಭಗಳಿಗೆ ಸಕುಟುಂಬ ಸಮೇತ ತೆರಳಲಾಗಿತ್ತು. ಆದರೀಗ ಕಾಲಬದಲಾದಂತೆ ಎಲ್ಲವೂ ನಶಿಸುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಪಾಶ್ಚಾತ್ಯ ಸಂಸ್ಕೃತಿ ಅಳವಡಿಸಿಕೊಂಡು ಅವಿಭಕ್ತ ಕುಟುಂಬ ಸಂಸ್ಕೃತಿ ಕಣ್ಮರೆಯಾಗಿವೆ ಎಂದರು.

ಆಧುನಿಕತೆ ಬೆಳೆದಂತೆ ಸಂಸ್ಕೃತಿಗಳು ಬದಲಾವಣೆ ಹೊಂದಿವೆ. ಮಕ್ಕಳು, ಪಾಲಕರ ಕೈಯಲ್ಲಿ ಮೊಬೈಲ್ ಒಂದಿದ್ದರೆ ಪ್ರಪಂಚವನ್ನೇ ಮರೆಯುವ ಸ್ಥಿತಿಯಿದೆ. ಪರಸ್ಪರ ಸಂಬAಧಿಕರು, ಸ್ನೇಹಿತರು, ಅಕ್ಕ ಪಕ್ಕದವರಿಂದ ಒಡನಾಟ ಕಳೆದುಕೊಂಡು ಕೇವಲ ಸಾಮಾಜಿಕ ಜಾಲತಾಣಕ್ಕೆ ಜೋತುಬೀದ್ದಿರುವುದು ವಿಷಾಧಕರ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಪರಸ್ಪರ ಸ್ನೇಹತ್ವ ರೂಪಿಸುವ ಸಲುವಾಗಿ ಹಿರಿಯರು, ಮಹಿಳೆಯರು ಹಾಗೂ ಯುವತಿಯರನ್ನು ಒಂದೇ ಸೂರಿನಡಿ ಒಗ್ಗೂಡಿಸಿ ರಸಪ್ರಶ್ನೆ ಆಯೋಜಿಸಿ ಬಾಂಧವ್ಯ ರೂಪಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂಥ ಕಾರ್ಯದಲ್ಲಿ ನಿವಾಸಿಗಳು ಹೆಚ್ಚು ಭಾಗವಹಿಸಿ ಮನರಂಜನಾ ಕೂಟವನ್ನು ಆನಂದಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಶೃಂಗೇರಿ ಭಾಗದಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿದ್ದ ಗಾದೆ, ಒಗಟು ಬಿಡಿಸುವ ಕಾರ್ಯಕ್ರಮ ಚಿಕ್ಕಮಗಳೂರಿಗೆ ಕರೆತಂದು ವಿನೂತನ ಪ್ರಯೋಗ ನಡೆಸಿ ಸಾಹಿತ್ಯದ ಆಸಕ್ತಿ ಹೊಂದಿರುವ ಮನಸ್ಸುಗಳಿಗೆ ಹದಗೊಳಿಸಿರುವುದು ಶ್ಲಾಘನೀಯ ಎಂದರು.

ಸಾಹಿತ್ಯಾತ್ಮಕ ಕಾರ್ಯಗಳಿಗೆ ತರಬೇತಿ ನೀಡುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಕರೆದೊಯ್ಯಬೇಕು. ಕುಟುಂಬದ ಹಿರಿಯರು ಅನಕ್ಷರಸ್ಥರಾದರೂ ಆಡುಭಾಷೆಯಲ್ಲೇ ಪದಗಳನ್ನು ಕಟ್ಟಿ ಬದುಕಿನ ಸಂದೇಶ ಸಾರುವ ಜಾನಪದ ಗೀತೆಗಳನ್ನ ರಚಿಸಿದ್ದರು. ಇದೀಗ ಅ ಗೀತೆಗಳು ರಾಜ್ಯಾದ್ಯಂತ ಮನ್ನಣೆ ಗಳಿಸುತ್ತಿವೆ ಎಂದು ಹೇಳಿದರು.

ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಆಂಗ್ಲಭಾಷೆ ಶಾಲೆಗಳ ಹಾವಳಿಯಿಂದ ಕನ್ನಡ ತನವು ಹಂತ ಹಂತವಾಗಿ ಕಣ್ಮರೆಯಾಗುತ್ತಿವೆ. ಅವ್ವ, ಅಜ್ಜ, ಅಮ್ಮ, ಅಪ್ಪ ಎನ್ನುವ ಪದಗಳು ಬದಲಾಗಿ ಡ್ಯಾಡಿ, ಮಮ್ಮಿ, ಗ್ರಾಂಡ್ ಫಾದರ್ ಎನ್ನುವ ಪದಗಳು ಚಾಲ್ತಿಯಾಗಿದೆ. ಹೀಗಾಗಿ ಪಾಲಕರು ಮಕ್ಕಳಿಗೆ ಎಳೆ ವಯಸ್ಸಿನಲ್ಲೇ ಭಾಷಾಭಿಮಾನ ಮೂಡಿಸುವ ಅಗತ್ಯವಿದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಗಾಧೆ, ಒಗಟುಗಳ ರಸಪ್ರಶ್ನೆಗೆ ಉತ್ತರಿಸುವ ಹಿರಿಯರು, ಮಹಿಳೆಯ ರು ಹಾಗೂ ಯುವತಿಯರು ಹಾಸ್ಯದ ಚಿನಕುರಳಿ ಪಟಾಕಿಯಂತೆ ಸಭಿಕರನ್ನು ನಕ್ಕು ನಗಿಸುವ ಮೂಲಕ ಪ್ರಶ್ನೆಗಳ ಉತ್ತರಕ್ಕೆ ನೀನೆಂದು, ನಾವೆಂದು ಕೈಎತ್ತುವ ಮುಖಾಂತರ ಮುಗಿಬಿದ್ದರು.

ಮಧ್ಯಾಹ್ನದಿಂದ ಆರಂಭಗೊAಡು ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರಸಭೆ ಅಧ್ಯಕ್ಷರು ಸೇರಿದಂತೆ ಸುಮಾರು ೫೦ಕ್ಕೂ ಹೆಚ್ಚು ಮಹಿಳಾ ಮಣಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಐದು ತಂಡಗಳಾಗಿ ವಿಂಗಡನೆಗೊಳಿಸಿದ ಬಳಿಕ ಅನೇಕ ಸುತ್ತುಗಳು ನಡೆದವು. ತಂಡದ ನೇರ ಪ್ರಶ್ನೆಗೆ ಉತ್ತರಿಸಿದರೆ ೧೦ ಅಂಕ, ಪಾಸ್‌ಗೊಳಿಸಿದರೆ ೫ ಅಂಕ ಎಂಬAತೆ ನಿಯಮಗಳನ್ನು ರೂಪಿಸಲಾಗಿತ್ತು.

ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್. ಎಸ್.ವೆಂಕಟೇಶ್ ಕಸಾಪ ಪದಾಧಿಕಾರಿಗಳಿಗೆ ಸೇವಾ ಧೀಕ್ಷೆ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಮಹಿಳಾ ಕಸಾಪ ಅಧ್ಯಕ್ಷೆ ಎಚ್.ಕೆ.ವಿಜಯಲಕ್ಷಿö್ಮÃ ವಹಿಸಿದ್ದರು. ನಗರಸಭೆ ಸದಸ್ಯ ಮಧುಕುಮಾರ್‌ರಾಜ್ ಅರಸ್, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್. ಎಸ್.ವೆಂಕಟೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಸತ್ಯನಾರಾಯಣ್, ನಗರಾಧ್ಯಕ್ಷ ಸಚಿನ್‌ಸಿಂಗ್, ಜಾನದಪ ಪರಿಷತ್ ತಾಲೂಕು ಅಧ್ಯಕ್ಷೆ ಚೈತ್ರ ಎಸ್.ಗೌಡ, ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ಗೀತಾ ಮೂರ್ತಿ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಶೈಲಾ ಬಸವರಾಜ್, ಖಜಾಂಚಿ ಸಾವಿತ್ರಿ ಶಿವಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net