

ಗೋಣಿಕೊಪ್ಪ:
ಗೋಣಿಕೊಪ್ಪ ದಸರಾ ಬಹುಭಾಷಾ ಕವಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕವನ ವಾಚಿಸಿ ಗಮನ ಸೆಳೆದರು. ಈ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 45 ಕವಿಗಳಲ್ಲಿ ಇವರೂ ಒಬ್ಬ ಕವಿಯಾದರು.
ಶನಿವಾರ ಕಾವೇರಿ ಕಲಾವೇದಿಕೆಯಲ್ಲಿ ಶ್ರೀಕಾವೇರಿ ದಸರಾ ಸಮಿತಿ, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಅವನು ಎಸ್ಸೆಸ್ಸೆಲ್ಸಿಯಲ್ಲಿ ಪಾಸ್ ಆದ ಪ್ರತಿಭಾವಂತ…. ಪಿಯುಸಿಯಲ್ಲಿ ಫೇಲಾದ ಪ್ರತಿಭಾ ಅಂತ ಎಂಬ ಕಾವ್ಯ ವಾಚಿಸಿದರು. ಕವನ ರಚನೆ ನನಗೆ ಕಷ್ಟ. ಹೀಗೆ ಪ್ರಯತ್ನ ಪಟ್ಟೆ. ವಿಜ್ಞಾನ ವಿದ್ಯಾರ್ಥಿಯಾದರೂ ಸಾಹಿತ್ಯದ ಬಗ್ಗೆ ಒಲವು ಹೆಚ್ಚಿದೆ ಎಂದು ಕವಿಗಳನ್ನು ಹುರಿದುಂಬಿಸಿದರು.
ಕಿಶೋರ್‌ಕುಮಾರ್ ತಾವೂರು, ಉಳುವಂಗಡ ಕಾವೇರಿ ಉದಯ, ರಂಜಿತ ಕಾರ್ಯಪ್ಪ, ಕೆ.ಟಿ.ವಾತ್ಸಲ್ಯ, ಎಂ.ಎ.ರುಬಿನಾ, ಹೇಮಲತಾ ಪೂರ್ಣಚಂದ್ರ, ವಿಮಲ ದಶರಥ, ಮುಕ್ಕಾಟಿ ಹರಿಣಿ ಗಿರೀಶ್, ವಾತ್ಸಲ ಶ್ರೀಶ, ಸುಕುಮಾರ್, ಬಿ.ಸಿ.ಶಂಕರಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ, ಹರೀಶ್ ಶರಳಾಯ, ಎಂ.ಬಿ.ಜಯಲಕ್ಷ್ಮಿ, ಪಿ.ವೈಲೇಶ್, ಕೆ.ಟಿ.ಪುಣ್ಯಾ, ಡಿ.ಎಸ್.ರಜತ್‌ರಾಜ್, ರವಿ ಓಂಕಾರ್, ವಿ.ಟಿ.ಶ್ರೀನಿವಾಸ್, ಎಸ್.ಸೈಮನ್, ಡಿ.ಪಿ.ದೃತಿ, ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಎಂ.ಎ.ಗೋಪಾಲಕೃಷ್ಣ, ಆರ್.ಜಯನಾಯಕ್, ಎಂ.ಆರ್.ಅಕ್ರಂ, ಎಸ್.ಎಂ.ರಜನಿ, ಸುನಿತಾ ವಿಶ್ವನಾಥ್, ಕಣಜಾಲು ಪೂವಯ್ಯ, ಕೆ.ಎ.ಜಶ್ಮಿ, ಕಡ್ಲೆರ ಜಯಲಕ್ಷಿ, ಇಂದ್ರವತಿ ದೇವಯ್ಯ, ಸಿ.ವಾಣಿ ರಾಘವೇಂದ್ರ, ನಾಮೇರ ಜಾನ್ಸಿ ಕುಟ್ಟಪ್ಪ, ಕೆ.ಸಿ.ದೇವಿದಾಸ್, ರಕ್ಷಿತ್ ಗೌಡ, ಟಿ.ವಿ.ಭಾಗ್ಯವತಿ ಅಣ್ಣಪ್ಪ ಅವರು ಕವನ ವಾಚಿಸಿದರು. ಕನ್ನಡ, ಕೊಡವ, ಯರವ, ಕುಂಬಾರ, ಅರೆಭಾಷೆ, ಮಲಯಾಳಂ ಭಾಷೆ ಕವನಗಳು ವ್ಯಕ್ತಗೊಂಡವು. ನವೀನ್ ಕಿರುಗೂರು, ಮಹಾದೇವ ಸ್ವಾಮಿ, ಸೌಮ್ಯಾ ನಾಗೇಶ್ ಭಾವಗೀತೆ ಹಾಡಿದರು.
ಕವಿಗೋಷ್ಠಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಚಾಲನೆ ನೀಡಿದರು. ಸಾಹಿತಿ ಹಾ.ತಿ ಜಯಪ್ರಕಾಶ್ ಮಾತನಾಡಿ, ಕವಿತೆ ಎನ್ನುವುದು ಪ್ರತಿಯೊಬ್ಬರಿಗೂ ಒಲಿಯುವುದಿಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ಕಾವ್ಯ ಕಟ್ಟುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಕವಿತೆ ಕಟ್ಟುವವರು ಪ್ರಕೃತಿ ಮತ್ತು ಮನುಷ್ಯ ಸಹಜ ಬದುಕಿನ ಬಗ್ಗೆ ಆಸಕ್ತಿ ಹೊಂದಿರಬೇಕೆಂದು ಹೇಳಿದರು.
ಚೆಸ್ ಆಟಗಾರ್ತಿ ನಿಖಿತಾ, ಶೌರ್ಯ ಪ್ರಶಸ್ತಿ ವಿಜೇತರಾದ ನಮೃತಾ ಅವರನ್ನು ಸನ್ಮಾನಿಸಲಾಯಿತು. ಪೊನ್ನಂಪೇಟೆ ತಾಲೂಕು ಕಸಾಪ ಅಧ್ಯಕ್ಷ ಕೊಳೇರ ದಯಾಚಂಗಪ್ಪ, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್.ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ ಬೀಳಗಿ, ಕವಿಗೋಷ್ಠಿ ಸಂಚಾಲಕ ಡಾ.ಜೆ.ಸೋಮಣ್ಣ, ಸ್ಥಳೀಯ ಗ್ರಾಪಂ ಅಧ್ಯಕ್ಷೆ ಚೈತ್ರಾ ಬಿ. ಚೇತನ್ ಇದ್ದರು.