

ಔರಾದ್: ಮನಸ್ಸು ಪರಿವರ್ತಿಸುವ ಮತ್ತು ಬದುಕು ಕಟ್ಟಿಕೊಡುವ ಶಕ್ತಿ ಸಾಹಿತ್ಯ ಮತ್ತು ಮಾತೃ ಭಾಷೆಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ಪಟ್ಟಣದ ಬಸವ ಗುರುಕುಲ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್‌ನಿಂದ ಅನೇಕ ಸಾಹಿತಿ ಹಾಗೂ ಕನ್ನಡ ಚಿಂತಕರ ಜನ್ಮದಿನ ಆಚರಿಸಿ ಅವರ ಆದರ್ಶ ಕನ್ನಡದ ಕಲಿಗಳಿಗೆ ಉಣ ಬಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ ಮಾತನಾಡಿ, ಯುವ ಪೀಳಿಗೆಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇದರಿಂದ ದೂರ ಉಳಿದು ಕನ್ನಡ ಉಳಿಸುವ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು .
ಮನ್ಮತಪ್ಪ ಹುಗ್ಗೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡತಿ ವಿಜಯಲಕ್ಷ್ಮೀ ಮೂಲಗೆ ಅವರ ಜನ್ಮದಿನ ಆಚರಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಡಾ ಶಾಲಿವಾನ ಉದಗೀರೆ, ಜಗನ್ನಾಥ ಮೂಲಗೆ, ಗುರುನಾಥ ತವಾಡೆ, ಛಾಯಾ ಜಕಾತೆ, ಪೂಜಾ ಬಿರಾದಾರ, ಸತೀಶ ಗಂದಿಗುಡೆ, ಶರಣಪ್ಪ ನೌಬಾದೆ, ಇಂದುಮತಿ ಎಡವೆ, ನಿರ್ಮಲ ಶೇರಿ, ಅಮರ ನಿಸ್ಪತ್ತೆ, ಲಲಿತಾ ಮೂಲಗೆ, ಮಲ್ಲಿಕಾರ್ಜುನ ಟಂಕಸಾಲೆ, ವಿಶ್ವನಾಥ ಉಪ್ಪಿ, ದಶರಥ ವಾಗಮಾರೆ, ರಜನಿಕಾಂತ, ಶಿವಕುಮಾರ ಪಾಟೀಲ್ ಇತರರಿದ್ದರು. ಸಂಜೀವ ವಳಂಡೆ ವಂದಿಸಿದರು. ನಾಗನಾಥ ಶಂಕು ನಿರೂಪಣೆ ಮಾಡಿದರು.