ಸಾಹಿತ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

2701Klb12
Published on


ಕಲಬುರಗಿ: ಶಹಾಬಾದನಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮೂಡ ಅವರು ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿಯಿಂದ ಸಿದ್ಧಪಡಿಸಲಾದ ಪೋಸ್ಟರ್ ಮತ್ತು ವಾಹನಗಳ ಸ್ಟಿಕ್ಕರ್ ಬಿಡುಗಡೆ ಮಾಡಿದರು.
ಮೂರು ದಶಕಗಳ ನಂತರ ತೊಗರಿ ನಾಡು ಕಲಬುರಗಿಯಲ್ಲಿ ಕನ್ನಡದ ಮೇರು ಹಬ್ಬ, ಅಕ್ಷರ ಜಾತ್ರೆ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಗ್ರಾಮೀಣ ಕ್ಷೇತ್ರದ ಸಾರ್ವಜನಿಕರು, ಶಾಲಾ ಮಕ್ಕಳು, ಶಿಕ್ಷಕರು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನುಡಿ ಜಾತ್ರೆಗೆ ಅಗಮಿಸುವ ಮೂಲಕ ದಶಕಗಳ ಕಾಲ ನೆನಪಿನಂಗಳದಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದರು. ತಹಸೀಲ್ದಾರ ಸುರೇಶ ಶಮರ್ಾ, ತಾಪಂ ಇಒ ಲಕ್ಷ್ಮಣ ಶೃಂಗೇರಿ, ನಗರಸಭೆ ಪೌರಾಯುಕ್ತ ವೆಂಕಟೇಶ, ನಗರಸಭೆ ಸದಸ್ಯರಾದ ಡಾ.ಅಹ್ಮದ್ ಪಟೇಲ್, ಸುರೇಶ ಕೋಬಾಳ, ಮಹ್ಮದ್ ಜುಬೇರ್, ಸಾಹೇಬಗೌಡ ಬೋಗುಂಡಿ, ಡಿವೈಎಸ್ಪಿ ವೆಂಕಣಗೌಡ ಪಾಟೀಲ್, ತಾಲೂಕು ಕಸಾಪ ಅಧ್ಯಕ್ಷ ಮೃತ್ಯುಂಜಯ ಹಿರೇಮಠ, ಪ್ರಮುಖರಾದ ಶರಣಗೌಡ ಪಾಟೀಲ್, ಮಲ್ಲಿಕಾಜರ್ುನ ಪೂಜಾರಿ, ಅಣವೀರಪ್ಪ ಇಂಗಿನಶೆಟ್ಟಿ, ಅಪ್ಪರಾವ ನಾಗಶೆಟ್ಟಿ, ಅಣ್ಣಪ್ಪ ದಸ್ತಾಪುರ, ನಾಗರಾಜ ಮೇಲಗಿರಿ, ರವಿ ಬೆಳಮಗಿ, ಸಂತೋಷ ದೊಡ್ಡಮನಿ, ಧನವಂತ ಮುದಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net