ಸಾಹಿತ್ಯ ಸಮ್ಮೇಳನಗಳು ವೇದಿಕೆಗಷ್ಟೇ ಸೀಮಿತ : ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವಣ್ಣ ಬೇಸರ

20dbp 1
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ


ಸಾಹಿತ್ಯ ಸಮ್ಮೇಳನಗಳು ವೇದಿಕೆಗಷ್ಟೆ ಸೀಮಿತವಾಗುತ್ತಿದ್ದು, ಕನ್ನಡ ಭಾಷೆ, ನೆಲ ಜಲದ ವಿಚಾರದಲ್ಲಿ ನೀರಾಸಕ್ತಿ ತೊರಲಾಗುತ್ತಿದೆ ಎಂದು ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವಣ್ಣ ಬೇಸರ ವ್ಯಕ್ತಪಡಿಸಿದರು.


ನಗರದ ಡಿಪಿವಿ ಕನ್ವೆಷ್ಷನ್ ಹಾಲ್‌ನಲ್ಲಿ ಮಂಗಳವಾರ ಕನ್ನಡ ಜಾಗೃತಿ ವೇದಿಕೆ ತಾಲೂಕು ಘಟಕ ಹಮ್ಮಿಕೊಂಡಿದ್ದ ಪುನೀತ್ ನಮನ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ನಾಡು-ನುಡಿ ಉಳಿವಿಗಾಗಿ 60 ವರ್ಷಗಳಿಂದ ಹೋರಾಟಗಳು ನಡೆದರೂ ಪ್ರಯೋಜನ ಕಾಣದಿರುವುದು ದುರದೃಷ್ಟಕರ. ಪ್ರಪಂಚದ 6000 ಪ್ರಮುಖ ಭಾಷೆಗಳಲ್ಲಿ 28ನೇ ಸ್ಥಾನದಲ್ಲಿರುವ ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಶ್ರೇಷ್ಠ ಭಾಷೆಯನ್ನೇ ಕಡೆಗಣಿಸಲಾಗುತ್ತಿರುವುದು ಕಳವಳಕಾರಿ ಎಂದರು.
ಕನ್ನಡ ಮಾಧ್ಯಮದವರಿಗೆ ಉದ್ಯೋಗ ಸಿಗಬೇಕು. ಪ್ರಾದೇಶಿಕತೆಯ ಅರಿವಿನೊಂದಿಗೆ ನಾಡಿನ ಇತಿಹಾಸ ಬಿಂಬಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುವ ಜತೆಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿಯೂ ಶ್ರಮಿಸಬೇಕು ಎಂದರು.
ಜೆಡಿಎಸ್ ಮುಖಂಡ ಹರೀಶ್‌ಗೌಡ ಮಾತನಾಡಿ, ಕನ್ನಡ ನಾಡಿನ ಅಳಿವು ಉಳಿವಿಗಾಗಿ ಸಂಘ-ಸಂಸ್ಥೆಗಳು ಧ್ವನಿ ಎತ್ತಬೇಕು. ಕನ್ನಡ ಅಸ್ಮಿತೆಯ ಉಳಿವಿಗಾಗಿ ಗಡಿಯಲ್ಲಿನ ಕನ್ನಡಿಗರ ಕಷ್ಟ-ನಷ್ಟವನ್ನು ಸೂಕ್ಷ್ಮವಾಗಿ ಮನಗಂಡು ಕಾರ್ಯಯೋಜಿತರಾಗಬೇಕುಎಂದು ಹೇಳಿದರು.


ಕನ್ನಡ ಜಾಗೃತಿ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಆರ್.ರುಕ್ಮಿಣಿ, ತಾಲೂಕು ಘಟಕ ಅಧ್ಯಕ್ಷ ಎಂ.ನಾಗರಾಜ್, ಉಪಾಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಸುಧಾಕರ್ ಕೆ.ಆರ್., ಸಹಕಾರ್ಯದರ್ಶಿ ಜಗದೀಶ್, ಮುಖಂಡರಾದ ಮುನಿರಾಜು, ಎ.ಸಿ.ಅಶೋಕ್, ಗಿರಿಜಮ್ಮ, ಸರೋಜಮ್ಮ, ವರಲಕ್ಷ್ಮೀ, ನಂಜಪ್ಪ, ರಮೇಶಗೌಡ, ಟೆಂಟ್ ಹೌಸ್ ಮಂಜಣ್ಣ, ಸಂಜೀವ್, ಹರ್ಷ, ಪ್ರವೀಣ್, ಚಂದ್ರಣ್ಣ, ಪ್ರಭಾಕರ್, ಚಿನ್ನತಾಯಪ್ಪ, ಕುಂಬಾರಪೇಟೆ ನಾರಾಯಣಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net