ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ

24blrp1
Published on

ಬೇಲೂರು: ಮಾರ್ಚ್ 7, 8ರಂದು ನಡೆಯಲಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನವನ್ನು ತಹಸೀಲ್ದಾರ್ ರಮೇಶ್ ಗುರುವಾರ ಬಿಡುಗಡೆ ಮಾಡಿದರು.


ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಲಾಂಛನ ಬಿಡುಗಡೆಗೊಳಿಸುವ ಮೂಲಕ ತಾಲೂಕಿನ ವೈವಿಧ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ. ವಿಶೇಷವಾಗಿ ಲಾಂಛನವು ಶಿಲ್ಪಕಲೆ, ಹಲ್ಮಿಡಿ ಶಾಸನ ಮತ್ತು ನೀರಾವರಿ, ಕೃಷಿ ಒಳಗೊಂಡಿರುವುದು ಉತ್ತಮವಾಗಿದೆ. 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದರು.


ತಾಲೂಕು ಕಸಾಪ ಅಧ್ಯಕ್ಷ ಬಿ.ಎಲ್.ರಾಜೇಗೌಡ ಮಾತನಾಡಿ, ಪ್ರಥಮ ಭಾರಿಗೆ ತಾಲೂಕಿನ ಪ್ರಕೃತಿ ಸೌಂದರ್ಯ ಒಳಗೊಂಡ ಲಾಂಛನವನ್ನು ಯುವ ಸಾಹಿತಿ ಎ.ಸಿ.ನಿರಂಜನ್ ವಿನ್ಯಾಸ ಮಾಡಿದ್ದು, 9 ನೇ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಮ್ಮೇಳನಕ್ಕೆ ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.


ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಮಾಜಿ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಸಾಹಿತಿ ಡಾ.ಶ್ರೀವತ್ಸ ವಟಿ, ಪಲ್ಲವಿ, ಮಾರುತಿ, ಕಸಾಪ ಪದಾಧಿಕಾರಿಗಳಾದ ಲೋಹಿತ್, ಗಣೇಶ್, ರವಿಹೊಳ್ಳ, ರಮೇಶ್, ಆನಂದ್, ಚನ್ನಕೇಶವೇಗೌಡ, ಪುರುಷೋತ್ತಮ, ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net