ಸಾಹಿತ್ಯ ಪ್ರಕಾರಗಳ ರಚನೆ ಹಿಂದೆ ವಚನ ಸಾಹಿತ್ಯ ಪ್ರಭಾವ

30-08-Shiva-2
ರಾಯಚೂರಿನ ಬಸವ ಕೇಂದ್ರದಲ್ಲಿ ವಚನ ದಿನದ ಅಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ.ಚನ್ನಬಸಯ್ಯ ಹಿರೇಮಠ ಮಾತನಾಡಿದರು. ಬಸವಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರು, ಅಕ್ಕನ ಬಳದ ಗೌರವಾಧ್ಯಕ್ಷೆ ಅನ್ನಪೂರ್ಣ ಮೇಟಿ, ಅಧ್ಯಕ್ಷೆ ಎಂ.ಲಲಿತಾ, ದತ್ತಿ ದಾನಿಗಳಾದ ನಾಗನಗೌಡ ಹರವಿ, ವೀರಭೂಷಣ ಇದ್ದರು.
Published on

ರಾಯಚೂರು: ಸಾಹಿತ್ಯ ಪ್ರಕಾರಗಳಾದ ರಗಳೆ, ಸಾಂಗತ್ಯ, ತ್ರಿಪದಿ, ಷಟ್ಪದಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ರಚನೆಯ ಹಿಂದೆ ವಚನ ಸಾಹಿತ್ಯ ಪ್ರಭಾವವಿದೆ. ವಚನಗಳು ಮನುಷ್ಯನ ಪ್ರಾಣಸ್ವರೂಪಿಯಾಗಿದೆ ಎಂದು ಹಿರಿಯ ಸಾಹಿತಿ ಡಾ.ಚನ್ನಬಸಯ್ಯ ಹಿರೇಮಠ ಹೇಳಿದರು.
ಸ್ಥಳೀಯ ಬಸವ ಕೇಂದ್ರದಲ್ಲಿ ವಚನ ದಿನದ ಅಂಗವಾಗಿ ಮಂಗಳವಾರ ಸಂಜೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನೈತಿಕ ನೆಲೆಗಟ್ಟಿನ ಮೇಲೆ ಬೆಳೆದ ಗಟ್ಟಿ ಸಾಹಿತ್ಯ ವಚನ ಸಾಹಿತ್ಯವಾಗಿದ್ದು, ಜನರಲ್ಲಿ ನೈತಿಕ ಪ್ರಜ್ಞೆ ಮೂಡಿಸಲು ಪ್ರಸ್ತುತ ದಿನಗಳಲ್ಲಿಯೂ ಬೆಳಕಾಗಿದೆ ಎಂದರು.
ಪ್ರಸ್ತುತ ದಿನಮಾನದಲ್ಲಿ ಸಮಾಜಕ್ಕೆ ಸುದೀರ್ಘ ಉಪನ್ಯಾಸಗಳಿಗಿಂತ ಅರ್ಥಪೂರ್ಣವಾದ ಶರಣರ ಒಂದೆರಡು ವಚನಗಳು ಜ್ಞಾನವನ್ನು ತಿಳಿಸುವುದರ ಜತೆಗೆ ನೈತಿಕ ವೌಲ್ಯ ಬೆಳೆಸುವ ನಿಟ್ಟಿನಲ್ಲಿ ವಚನ ಸಾಹಿತ್ಯ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷ ವಹಿಸಿದ್ದ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಮಾತನಾಡಿ, ಹಣ, ಅಕಾರ, ಅಂತಸ್ತು ಏನೇಲ್ಲ ಇದ್ದರೂ ಇಂದು ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಲು ನಮ್ಮ ಸಂಸ್ಕೃತಿ, ಸಂಸ್ಥಾರ ಕುಸಿಯುತ್ತಿರುವುದು ಕಾರಣವಾಗಿದೆ. ಶರಣರ ಜೀವನ ಆದರ್ಶಗಳು ನಮಗೆ ದಾರಿದೀಪವಾದಾಗ ಮಾತ್ರ ನೆಮ್ಮದಿ ದೊರೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವೌಢ್ಯಾಚರಣೆ ಕುರಿತು ಬಸವಶ್ರೀ ಶಾಲೆ ಮಕ್ಕಳಿಂದ ನಾಟಕ ಪ್ರದರ್ಶನ ಜರುಗಿತು. ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ವೀರಭೂಷಣ, ನಾಗನಗೌಡ ಹರವಿ, ಅಕ್ಕನ ಬಳದ ಗೌರವಾಧ್ಯಕ್ಷೆ ಅನ್ನಪೂರ್ಣ ಮೇಟಿ, ಅಧ್ಯಕ್ಷೆ ಎಂ.ಲಲಿತಾ, ಪದಾಕಾರಿಗಳಾದ ಪರಿಮಳ ಮಸ್ಕಿ, ರೇಖಾ ಪಾಟೀಲ್, ಜಯಶ್ರೀ, ದಾನಮ್ಮ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net