

ಯಾದಗಿರಿ: ಓದು ವಿಸ್ತಾರವಾದಂತೆ ವೈಚಾರಿಕ ಪ್ರಜ್ಞೆ ಬೆಳೆಯುತ್ತದೆ. ಪ್ರತಿಯೊಂದು ಜ್ಞಾನ, ಶಿಸ್ತುಗಳು ವೈಚಾರಿಕತೆಯನ್ನು ಪ್ರತಿಪಾದಿಸುತ್ತವೆ ಎಂದು ಕಲಬುರಗಿ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ತಿಳಿಸಿದರು.
ಬುಧವಾರ ಇಲ್ಲಿಗೆ ಸಮೀಪದ ಭೀಮರಾಯನ ಗುಡಿಯ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಕಾಲೇಜು ಅಂಗಳದಲ್ಲಿ ಸಾಹಿತ್ಯ ಚಿಂತನೆ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ, ಶರಣರ, ಸೂಫಿ ಸಂತರ, ತತ್ವಪದಕಾರರ, ಕೀರ್ತನಕಾರರ, ಸಾಹಿತ್ಯ ಚಿಂತನಗಳಲ್ಲಿ ಸೌಹಾರ್ದತೆ, ಧಾಮರ್ಿಕ ಸಾಮರಸ್ಯ, ಸಹಿಷ್ಣುತೆ, ಸಮಾನತೆಯ ವಿಚಾರಗಳು ಮತ್ತು ವೈಚಾರಿಕತೆ ನೆಲೆಗಳು ಕಂಡುಬರುತ್ತವೆ ಎಂದರು.
ಇಂಥ ಚಿಂತನೆಗಳ ಮೂಲಕ ಜನರಲ್ಲಿ ವೈಚಾರಿಕತೆಯ ವಿವೇಕವನ್ನು ಮೂಡಿಸಿದ್ದಾರೆ. ಸಾಹಿತ್ಯ ಪರಂಪರೆಯ ಎಲ್ಲ ಪ್ರಕಾರಗಳಲ್ಲಿ ವೈಚಾರಿಕ ಪ್ರಜ್ಞೆಯ ಚಿಂತನೆಗಳು ಕಾಣಬಹುದು. ಬುದ್ಧ, ಬಸವ, ಗಾಂ, ಅಂಬೇಡ್ಕರ್ ಮುಂತಾದ ಮಹಾತ್ಮರ ತತ್ವ ವಿಚಾರಗಳಲ್ಲಿನ ವೈಚಾರಿಕತೆಯನ್ನು ವಿದ್ಯಾರ್ಥಿಗಳು ಓದಿಕೊಳ್ಳಬೇಕು ಎಂದು ಸಲಹೆ ಮಾಡಿದರು.