ಸಾಹಿತ್ಯ ಚಟುವಟಿಗಳಿಗೆ ಸಹಕಾರ,ಶಾಸಕ ಪಪ್ಪಿ ಭರವಸೆ

CTD 5 KASAPA-03
Published on

ಚಿತ್ರದುರ್ಗ: ಸಾಹಿತ್ಯ ಪರಿಷತ್ತಿನ ಎಲ್ಲ ಚಟುವಟಿಕೆಗಳಿಗೂ ಅಗತ್ಯ ಸಹಕಾರ ನೀಡಲಾಗುವುದೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭರವಸೆ ನೀಡಿ ದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಶಾಸಕರ ಭೇಟಿ ಬಳಿಕ ಹೇಳಿಕೆಯಲ್ಲಿ ತಿಳಿಸಿ ರುವ ಅವರು,ಜಿಲ್ಲೆಯಲ್ಲಿ ಪರಿಷತ್ ಚಟುವಟಿಕೆಗಳು ಚುರುಕಿನಿಂದ ನಡೆಯುತ್ತಿವೆ. ಆರು ತಾಲೂಕುಗಳಲ್ಲೂ ಘಟಕಗಳು ಸಕ್ರಿಯವಾ ಗಿವೆ.

ಆದರೆ ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ಕನ್ನಡ ಭವನದ ಕೊರತೆಯಿದೆ. ಭವನದ ನಿರ್ಮಾಣ ಸಾಹಿತ್ಯಾಸಕ್ತರ ಮತ್ತು ಪರಿಷತ್ ಸದಸ್ಯ ರ ಬಹುದಿನದ ಬೇಡಿಕೆಯಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಸಾಹಿತ್ಯ,ಸಂಸ್ಕೃತಿ ಚಟುವಟಿಕೆಗಳನ್ನು ಕೈಗೊಳ್ಳಲು ಕನ್ನಡ ಭವನದ ಕೊರತೆಯಿದೆ.

ಪರಿಷತ್ತಿಗೆ ವಿಶಾಲ ನಿವೇಶನವಿದ್ದು,ನಿರ್ಮಾಣಕ್ಕೆ ಸಹಕರಿಸುವಂತೆ ಶಾಸಕರಿಗೆ ಮನವಿ ಮಾಡಿದ್ದೇವೆ. ಕನ್ನಡದ ಎಲ್ಲ ಕಾರ್ಯಗಳಿಗೂ ಅಗತ್ಯ ಎಲ್ಲ ಸಹಕಾರವನ್ನು ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದು ಶಿವಸ್ವಾಮಿ ತಿಳಿಸಿದ್ದಾರೆ. ಈ ವೇಳೆ ಶಾಸಕರನ್ನು ಪರಿಷತ್ ಪರವಾಗಿ ಗೌರವಿಸಲಾಯಿತು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ.ಶ್ರೀನಿವಾಸ ಮಳಲಿ,ಕಾರ್ಯದರ್ಶಿ ಕೆಪಿಎಂ ಗಣೇ ಶಯ್ಯ,ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಮಹೇಶ್,ಸಿ.ನಾಗರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net