ಸಾಹಿತ್ಯ ಕ್ಷೇತ್ರದಲ್ಲೂ ಮಹಿಳೆ ಗುರುತಿಸಿಕೊಳ್ಳಲಿ

17Manju7-Web
ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಜರುಗಿದ ಜಿಲ್ಲಾ ಲೇಖಕಿಯರ ಸಂಘದ 22ನೇ ವಾರ್ಷಿಕೋತ್ಸವದಲ್ಲಿ ಕಥಾ ಸ್ಪರ್ಧೆಯ ವಿಜೇತರನ್ನು ಸನ್ಮಾನಿಸಲಾಯಿತು. ಆಶಾ ಕಡಪಟ್ಟಿ , ನೀಲಗಂಗಾ ಚರಂತಿಮಠ, ಹೇಮಾವತಿ ಸೊನೊಳ್ಳಿ, ಅನಿತಾ ಮಾಲಗತ್ತಿ, ಸುನಂದಾ ಹಾಲಬಾವಿ, ನಿರ್ಮಲಾ ಬಟ್ಟಲ, ಹೇಮಾ ಭರಬರಿ ಇತರರು ಇದ್ದರು.
Published on

ಬೆಳಗಾವಿ: ಮಹಿಳೆಯರು ರಾಜಕೀಯ, ಸಾಮಾಜಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಹೆಚ್ಚು ಗುರುತಿಸಿಕೊಳ್ಳುವುದು ಅವಶ್ಯ ಎಂದು ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಜರುಗಿದ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ 22ನೇ ವಾರ್ಷಿಕೋತ್ಸವ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಕಾಲಕ್ಕೆ ಬೆಳಗಾವಿ ಲೇಖಕಿಯರ ಸಂಘದಲ್ಲಿ ಕೇವಲ ನಾಲ್ಕು ಸದಸ್ಯರು ಇದ್ದರು. ಇವತ್ತು ಅದು ತುಂಬು ಕುಟುಂಬವಾಗಿದೆ ಎಂದು ಹೇಳಲು ಸಂತಸವಾಗುತ್ತದೆ ಎಂದರು.

ಲೇಖಕಿ ನೀಲಗಂಗಾ ಚರಂತಿಮಠ ಮಾತನಾಡಿ, ಜಿಲ್ಲಾ ಲೇಖಕಿಯರ ಸಂಘದ ಸದಸ್ಯರು ಅಂಬೇಡ್ಕರ್ ಉದ್ಯಾನದಲ್ಲಿ ಕನ್ನಡ ಸಾಹಿತ್ಯ ಭವನದ ಮುಂಭಾಗದ ಮರದ ಕೆಳಗೆ ಸಭೆ ನಡೆಸುತ್ತಿದ್ದೆವು. ಆ ದಿನಗಳನ್ನು ಈಗ ನೆನಪಿಸಿಕೊಂಡರೆ ಸಂತೃಪ್ತ ಭಾವ ಆವರಿಸುತ್ತದೆ. ಸಂಘವು ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದರು.

ಜ್ಯೋತಿ ಬದಾಮಿ ಅವರು ಡಾ.ಗುರುದೇವಿ ಹುಲೆಪ್ಪನವರಮಠ ಅವರಿಗೆ ಹಾಗೂ ಸುಧಾ ಪಾಟೀಲ ಅವರು ಡಾ.ರಾಜೇಶ್ವರಿ ಹಿರೇಮಠ ಅವರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸಿದರು. ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಅನಿತಾ ಮಾಲಗತ್ತಿ, ಸುನಂದಾ ಹಾಲಬಾವಿ, ನಿರ್ಮಲಾ ಬಟ್ಟಲ, ಹೇಮಾ ಭರಬರಿ, ಅಂಜಲಿ ಗರಗ, ಮೀನಾಕ್ಷಿ ಸೂಡಿ, ಅನ್ನಪೂರ್ಣಾ ಹಿರೇಮಠ ಅವರಿಗೆ ಪ್ರಶಸ್ತಿ ನೀಡಲಾಯಿತು. ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷ ಹೇಮಾವತಿ ಸೊನೊಳ್ಳಿ, ಕಾರ್ಯದರ್ಶಿ ರಾಜನಂದಾ ಘಾರ್ಗಿ, ಕೋಶಾಧ್ಯಕ್ಷೆ ಇಂದಿರಾ ಮೋಟೆಬೆನ್ನೂರು, ಶೈಲಜಾ ಕುಲಕರ್ಣಿ, ಭುವನೇಶ್ವರಿ ಪೂಜಾರಿ, ಆಶಾ ಯಮಕನಮರಡಿ, ಶೈಲಜಾ ಭಿಂಗೆ, ಶಾಂತಾ ಮಸೂತಿ, ಮೈತ್ರೇಯಿಣಿ ಗದಿಪ್ಪಗೌಡರ, ವಿದ್ಯಾ ರೆಡ್ಡಿ, ಸುನಂದಾ ಎಮ್ಮೆ, ಶಾಂತಾ ಮಸೂತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net