

ಚಿಕ್ಕಮಗಳೂರು: ಬೈರಪ್ಪನವರು ಜನ ಸಾಮಾನ್ಯರಂತೆ ಸಮಾಜದ ಎಲ್ಲರೊಂದಿಗೆ ಬೆರೆತು ಹಲವಾರು ಮೇರು ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ ಸಾಹಿತ್ಯ ಕೃಷಿ ಜೊತೆಗೆ ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡವರು ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.
ನಗರದ ಕನ್ನಡಸೇನೆ ಕಚೇರಿಯಲ್ಲಿ ನಗರ ಘಟಕದಿಂದ ಮಂಗಳವಾರ ಆಯೋಜಿಸಿದ್ಧ ಎಸ್.ಎಲ್. ಬೈರಪ್ಪನವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಎಸ್.ಎಲ್. ಬೈರಪ್ಪ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ. ಅವರ ಕೃತಿಗಳಲ್ಲಿ ಸಾಮಾಜಿಕ ಕಳಕಳಿ ಇದೆ. ಇತ್ತೀಚಿನ ವರ್ಷಗಳಲ್ಲಿ ಹೆಸರಾಂತ ಸಾಹಿತಿಗಳು ನಿಧನರಾಗಿದ್ದಾರೆ. ದೊಡ್ಡ, ದೊಡ್ಡ ಕವಿಗಳು ಬರೆದ ಗ್ರಂಥಗಳನ್ನು, ಕಾದಂಬರಿಗಳನ್ನು ಓದುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು.
ಭೈರಪ್ಪನವರ ಕಾದಂಬರಿಗಳು ಕನ್ನಡ ಓದುಗರ ಮನಸ್ಸಿನಲ್ಲಿ ಅಳಿಯದ ಗುರುತು ಮೂಡಿಸಿದೆ. ಸಮಾ ಜದಲ್ಲಿ ಅಸ್ಥಿತ್ವದಲ್ಲಿದ್ಧ ಅಸಮಾನತೆ, ಸಂಪ್ರದಾಯಗಳ ಒತ್ತಡ, ಬೇಧಭಾವ ಇತ್ಯಾದಿ ವಿಷಯಗಳನ್ನು ಅವರು ತಮ್ಮ ಕಾದಂಬರಿಗಳಲ್ಲಿ ದಶಕಗಳ ಹಿಂದೆಯೇ ಎತ್ತಿಹಿಡಿದವರು ಎಂದರು.
ಕನ್ನಡಸೇನೆ ನಗರಾಧ್ಯಕ್ಷ ಸತೀಶ್ ಮಾತನಾಡಿ ಜೀವನದಲ್ಲಿ ಭೈರಪ್ಪನವರು ಅನೇಕ ಸಂಕಷ್ಟಗಳನ್ನು ಎದುರಿಸಿ ಪರಿಶ್ರದಿಂದ ಸಾಹಿತ್ಯ ಕ್ಷೇತ್ರಲ್ಲಿ ಶ್ರೇಷ್ಟಸ್ಥಾನ ಗಳಿಸಿದವರು. ಪರ್ವ ಸೇರಿದಂತೆ ಅನೇಕ ಕಾದಂಬರಿ ಗಳು ಅವರ ಕೀರ್ತಿಯನ್ನು ಹೆಚ್ಚಿಸಿದ್ದು ಪದ್ಮಭೂಷಣ ಪ್ರಶಸ್ತಿ ಪಡೆದಂತಹ ಬೈರಪ್ಪನವರ ಅಗಲಿಕೆಯಿಂದ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದೆ ಎಂದು ತಿಳಿಸಿದರು.
ಬೈರಪ್ಪನವರು ನೇರ ದಿಟ್ಟ ಸಾಹಿತಿ. ಸತ್ಯವನ್ನು ತಿಳಿಸಿದ ಮಹಾನ್ ವ್ಯಕ್ತಿ. ಪ್ರತಿಯೊಂದನ್ನು ಸಂಶೋ ಧನೆಯ ಮೂಲಕ ಸಾಹಿತ್ಯ ರಚಿಸಿದವರು. ಇವರ ಕಾದಂಬರಿಗಳು ನಾಡಿನ ಜೀವಂತಿಕೆಯ ಸಾಹಿತ್ಯವಾಗಿದೆ ಎನ್ನುವುದಕ್ಕೆ ಭೈರಪ್ಪನವರ ಬರವಣಿಗೆಗಳು ಅವರ ಪುಸ್ತಕ ಮಾರಾಟಗಳೆ ಸಾಕ್ಷಿಯಾಗಿದೆ ಎಂದರು.
ಕನ್ನಡಸೇನೆ ಜಿಲ್ಲಾ ವಕ್ತಾರ ಹುಣಸೇಮಕ್ಕಿ ಲಕ್ಷö್ಮಣ್ ಮಾತನಾಡಿ ಸಾಹಿತ್ಯಲೋಕದ ದಿಗ್ಗಜ ಎಸ್.ಎಲ್. ಭೈರಪ್ಪನವರ ಬರವಣಿಗೆಗಳು ಎಲ್ಲರಿಗಿಂತ ವಿಭಿನ್ನವಾಗಿದ್ದವು. ಕಥೆ, ಕಾದಂಬರಿ ರಚಿಸುವ ವೇಳೆಯಲ್ಲಿ ಹ ಲವಾರು ಸಂಶೋಧನೆಗಳನ್ನು ನಡೆಸುವ ಜೊತೆಗೆ ಪದಬಳಕೆಗಳು ಅಷ್ಟೇ ಸ್ಪಷ್ಟತೆಯಿಂದ ಕೂಡುವಂತೆ ಚಾಕ್ಯ ತೆ ಅವರಲ್ಲಿತ್ತು ಎಂದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಮುಖಂಡರುಗಳಾದ ಕಳವಾಸೆ ರವಿ, ಶಂಕರೇಗೌಡ, ಪಾಲಾಕ್ಷಿ, ಪವ ನ್, ಅಪ್ಪು, ರೋಷನ್, ರಂಗ, ಅಭಿ, ಆನಂದ್, ಮಾದೇವ, ರಾಜೇಶ್, ವನಿತಾ, ಸಂಜೀವ್ ಶೆಟ್ಟಿ ಮತ್ತಿ ತರರು ಉಪಸ್ಥಿತರಿದ್ದರು.