ಸಾಹಿತಿಗಳು ಆತ್ಮಗೌರವ ಕಳೆದುಕೊಳ್ಳದಿರಲಿ

2
ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಕಾದಂಬರಿ ಬಿಡುಗಡೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಲ್​.ಎಸ್​. ಶಾಸಿ, ಡಾ.ವೈ.ಎಂ. ಯಾಕೊಳ್ಳಿ, ಪ್ರೊ.ಶಕುಂತಲಾ ದಂಡಗಿ, ಡಾ.ಸಿ.ಕೆ. ನಾವಲಗಿ, ವಿಶ್ವಾನಾಥ ಕಡಕೋಳ, ಜಯಾನಂದ ಮುನವಳ್ಳಿ ಡಾ.ವಿರಾಜ ಮೋದಿ ಲಕ್ಷಿ$್ಮ ದುಗ್ಗಾಣಿ ಇತರರು ಇದ್ದರು.
Published on

ಗೋಕಾಕ: ಸಾಹಿತಿಗಳು ಆತ್ಮಗೌರವ ಕಳೆದುಕೊಳ್ಳದೆ ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಎಲ್​.ಎಸ್​.ಶಾಸಿ ಹೇಳಿದರು.

ನಗರದ ಜೆಎಸ್​ಎಸ್​ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಪರಮೇಶ್ವರಿ ಪ್ರಕಾಶನ ಹಾಗೂ ಸಾಹಿತ್ಯ ಚಿಂತನ ಕಮ್ಮಟ ಗೋಕಾಕ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರೊ.ಶಕುಂತಲಾ ದಂಡಗಿ ಅವರ "ಆತ್ಮ ತಪ್ತಿ' ಕಾದಂಬರಿ ಬಿಡುಗಡೆ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದರು.

ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ, ಸಹದಯಿ ಓದುಗರ ಅಭಿಪ್ರಾಯವೇ ಕತಿಗಳ ಪರಿಚಯ ಹಾಗೂ ವಿಮರ್ಶೆಯಾಗಿದೆ. ಆತ್ಮತಪ್ತಿ ಕಾದಂಬರಿ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ಓದುಗರಿಗೆ ತಪ್ತಿ ನೀಡುತ್ತದೆ ಎಂದರು.

ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ಶಕುಂತಲಾ ದಂಡಗಿ ಅವರು ಸುಂದರವಾದ ಕಾದಂಬರಿ ರಚಿಸಿ ಓದುಗರೊಂದಿಗೆ ತಾವು ಆತ್ಮತಪ್ತಿ ಹೊಂದಿದ್ದಾರೆ. ಸಮಾಜದಲ್ಲಿ ನಡೆಯುವ ನೆಜ ಟನೆಗಳೊಂದಿಗೆ ಮನುಷ್ಯ ಒಳ್ಳೆಯವನಾಗಬೇಕು ಎಂಬುದನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ ಎಂದರು.

ಗೋಕಾಕ ಶಿಣ ಸಂಸ್ಥೆಯ ಚೇರ್ಮನ್​ ವಿಶ್ವಾನಾಥ ಕಡಕೋಳ, ಕೆಎಲ್​ಇ ನಿರ್ದೇಶಕ ಜಯಾನಂದ ಮುನವಳ್ಳಿ, ಸಾಹಿತಿಗಳಾದ ಮಹಾಲಿಂಗ ಮಂಗಿ, ಪ್ರೊ.ಚಂದ್ರಶೇಖರ ಅಕ್ಕಿ, ಜಯಾನಂದ ಮಾದರ, ಈಶ್ವರಚಂದ್ರ ಬೆಟಗೇರಿ, ಶಕುಂತಲಾ ದಂಡಗಿ, ಪ್ರಾಚಾರ್ಯ ಡಾ.ವಿರಾಜ ಮೋದಿ, ಸುರೇಶ್​ ಮುದ್ದಾರ, ಲಕ್ಷಿ$್ಮ ದುಗ್ಗಾಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net