ಸಾಹಿತಿ ಡಾ.ಕಂಬಾರಗೆ ಶಿವಾನುಭವ ರತ್ನ ಪ್ರಶಸ್ತಿ

chandrashekhar-kambar
Published on

ಕೊಡೇಕಲ್ : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರಿಗೆ ಶ್ರೀ ರಾಚೇಶ್ವರ ಮಹಾ ಶಿವಯೋಗಿಗಳ ೫೫೫ನೇ ಸ್ಮರಣೋತ್ಸವ ಮತ್ತು ಸಂಚಾರಿ ಶಿವಾನುಭವ ಪ್ರವಚನ ಸಮಾರೋಪ ನಿಮಿತ್ತ ಶನಿವಾರ ಶಿವಾನುಭವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶ್ರೀ ನೀಲಕಂಠ ಸ್ವಾಮೀಜಿ ವಿರಕ್ತಮಠ ತಿಳಿಸಿದರು.

ಸಂಜೆ ೬ಕ್ಕೆ ನಡೆಯುವ ಪ್ರವಚನ ಮಂಗಲೋತ್ಸವದಲ್ಲಿ ಪ್ರಶಸ್ತಿ ನೀಡಲಾಗುವುದು. ಸಹಸ್ರ ಮುತ್ತೆÊದೆಯರಿಗೆ ಉಡಿ ತುಂಬುವ, ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭಾನುವಾರ ಬೆಳಗ್ಗೆ ೮ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ೧೦೦೮ ಪೂರ್ಣಕುಂಭಗಳ ಮೆರವಣಿಗೆ ನಡೆಯಲಿದೆ. ಕಕ ಉತ್ಸವ ನಿಮಿತ್ತ ಮಾಜಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಧ್ವಜಾರೋಹಣ ನೆರವೇರಿಸಿದ ಬಳಿಕ ನಡೆಯುವ ಧರ್ಮಸಭೆಯಲ್ಲಿ ಶ್ರೀ ಜಗದ್ಗುರು ಅನ್ನದಾನೀಶ್ವರ ಸ್ವಾಮೀಜಿ, ಶ್ರೀ ನಿಜಗುಣಪ್ರಭು ಸ್ವಾಮೀಜಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net