ಸಾವು ತಂದ ಸೌಭಾಗ್ಯ ನಾಟಕ ಇಂದು

Nataka
Published on

ಚಿತ್ರದುರ್ಗ: ಶಕ್ತಿದೇವತೆಗಳಾದ ಬರಗೇರಮ್ಮ-ತಿಪ್ಪಿನಘಟ್ಟಮ್ಮ ಭೇಟಿ ಮಹೋತ್ಸವದ ಅಂಗವಾಗಿ ನವತರುಣ ಕಲಾಸಂಘದಿಂದ ಮೇ 7ರಂದು ರಾತ್ರಿ 9.30ಕ್ಕೆ ಕರುವಿನಕಟ್ಟೆ ವೃತ್ತದ ಬಳಿ ಸಾವು ತಂದ ಸೌಭಾಗ್ಯ ಅರ್ಥಾತ್ ಅರಿಶಿನ ತಂದ ಆಮಂತ್ರಣ ನಾಟಕ ಹಮ್ಮಿಕೊಳ್ಳಲಾಗಿದೆ. ಕಲಾಸಕ್ತರು ವೀಕ್ಷಿಸಿ, ಪ್ರೋತ್ಸಾಹಿಸಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮನವಿ ಮಾಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಕ್ಕ-ತಂಗಿಯರ ಭೇಟಿ ಜಿಲ್ಲೆಯಲ್ಲೇ ಅತ್ಯಂತ ಮಹತ್ವ ಪಡೆದಿದೆ. ಭೇಟಿಯಾದ ನಂತರ ಸಾಮಾಜಿಕ, ಪೌರಾಣಿಕ ನಾಟಕ ಪ್ರದರ್ಶನ ಅನೇಕ ವರ್ಷಗಳಿಂದ ನಡೆಯುತ್ತಿದೆ. ಈ ಬಾರಿಯ ನಾಟಕ ಕೂಡ ವಿಶೇಷವಾಗಿದೆ ಎಂದರು.

ಎಚ್.ಕೆ.ಮಲ್ಲಿಕಾರ್ಜುನ ತುರ್ಚಘಟ್ಟ ವಿರಚಿತ ಸಾಮಾಜಿಕ ಹಾಸ್ಯ ಭರಿತ ಈ ನಾಟಕ ಅನೇಕ ಕಲಾವಿದರಿಂದ ಪ್ರದರ್ಶನವಾಗಲಿದೆ. ದೊಡ್ಡ ಚೆಲ್ಲೂರು ಮಾರುತಿ ಡ್ರಾಮಾ ತಂಡ ಸೀನರಿ ಹಾಕಿದ್ದು, ಪರಶುರಾಮಪುರದ ಆರ್.ಚಿದಾನಂದ ಧ್ವನಿ ಮತ್ತು ಬೆಳಕು ಸಂಯೋಜನೆಯಲ್ಲಿ ಝಗಮಗಿಸುವ ವೇದಿಕೆಯಲ್ಲಿ ನಾಟಕ ನಡೆಯಲಿದೆ ಎಂದು ಹೇಳಿದರು.

ಶಿವಲಿಂಗಾನಂದ ಶ್ರೀ, ಕೃಷ್ಣ ಯಾದವಾನಂದ ಶ್ರೀ ಸಾನಿಧ್ಯ, ಸಿ.ಟಿ.ಕೃಷ್ಣಮೂರ್ತಿ ಅಧ್ಯಕ್ಷತೆ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭೆ ಸದಸ್ಯರಾದ ಭಾಸ್ಕರ್, ಚಂದ್ರಶೇಖರ್, ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ದೊಡ್ಡಗರಡಿ ಅಧ್ಯಕ್ಷ ಎನ್.ತಿಮ್ಮಣ್ಣ, ಮುಖಂಡ ಕದುರಪ್ಪ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net