

ಚಿಕ್ಕೋಡಿ: ಪರಿಸರ ಉಳಿಸಿದರೆ ಮಾತ್ರ ಜೀವಸಂಕುಲ ಉಳಿಯಲು ಸಾಧ್ಯ ಎಂದು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.
ಪಟ್ಟಣದ ಕಾರ್ಖಾನೆ ಆವರಣದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಮಾತನಾಡಿ, ಕಾರ್ಖಾನೆ ಎಂದಿನಂತೆ ಪ್ರಸಕ್ತ ವರ್ಷ ಸಾವಿರಾರು ಸಸಿ ನೆಡುವ ಗುರಿ ಹೊಂದಿದೆ. ಭೂ ಮರುಸ್ಥಾಪನೆ, ಮರುಭೂಮೀಕರಣ ಹಾಗೂ ಬರ ತಡೆಯುವಿಕೆ ಕುರಿತು ಗಂಭೀರವಾಗಿ ಯೋಚಿಸಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನದ ಮೂಲಕ ಪರಿಸರ ನಾಶದಿಂದ ಆಗಬಹುದಾದ ತೊಂದರೆಗಳನ್ನು ತಡೆಯಬೇಕು. ಪ್ರತಿಯೊಬ್ಬರೂ ಪರಿಸರ ಸಂಪತ್ತನ್ನು ಉಳಿಸಿ ಬೆಳೆಸುವತ್ತ ಶ್ರಮಿಸಬೇಕು ಎಂದರು.
ಕಾರ್ಖಾನೆ ನಿರ್ದೇಶಕ ಭೀಮಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಐ.ಎನ್.ಗೊಲಭಾವಿ ಇತರರು ಇದ್ದರು.